ತಾಲೂಕಿನಲ್ಲಿ ಡಿಜಿಪೇ ಕಾಯ೯ಕ್ರಮಕ್ಕೆ ಚಾಲನೆ
ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ಮಾತನಾಡಿ ಗ್ರಾಮಮಟ್ಟದ್ದಲ್ಲಿ ಎಲ್ಲಾ ಸದಸ್ಯರಿಗೆ ಬ್ಯಾಂಕಿನ ಸೇವೆಯ ಸೌಲಭ್ಯ ಸಿಗುವಂತೆ ನಮ್ಮ ಗ್ರಾಮಭಿವೃದ್ಧಿ ಸಿಎಸ್ ಸಿ ಕೇಂದ್ರದಲ್ಲಿ ಡಿಜಿ-ಪೇ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು ಇದನ್ನು ಎಲ್ಲ ಸದಸ್ಯರು ಪ್ರಯೋಜನ ಪಡೆದು ಕೊಳ್ಳುವಂತೆ ತಿಳಿಸಿದರು ಹಾಗೂ ಸಿಎಸ್ ಸಿ ಕಾರ್ಯಕ್ರಮಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಮೂಡುಕೊಣಾಜೆ ಒಕ್ಕೂಟದ ಅಧ್ಯಕ್ಷೆ ಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯೋಜನೆಯಿಂದ ಎಲ್ಲಾ ಸದಸ್ಯರಿಗೆ ಸರಕಾರದ ಸೌಲಭ್ಯಗಳು ಗ್ರಾಮ ಮಟ್ಟದಲ್ಲಿ
ಸಿಗುತ್ತಿದ್ದೂ ಇನ್ನು ಬ್ಯಾಂಕಿನ ಸೇವೆಗಳು ಸಹ ನಮಗೆ ಸಿಗುತ್ತಿದ್ದೂ ನಮಗೆ ಖುಷಿ ತಂದಿರುವ ವಿಷಯ, ಮುಂದೆಯೂ ಸಹ ಎಲ್ಲಾ ಸೇವೆ ಗಳನ್ನು ಗ್ರಾಮೀಣ ವ್ಯಾಪ್ತಿಯ ಜನರಿಗೆ ಸೇವೆಯ ಪ್ರಯೋಜನಗಳನ್ನು ತಮ್ಮದೇ ಗ್ರಾಮದಲ್ಲಿ ಪಡೆದುಕೊಳ್ಳುವಂತೆ ಆಗಲಿ ಎಂದು ಹಾರೈಸಿದರು.
ವಲಯ ಮೇಲ್ವಿಚಾರಕರಾದ ಚಂದ್ರಹಾಸ ಶೆಟ್ಟಿ, ಸೇವಾಪ್ರತಿನಿಧಿ ಜಯಲಕ್ಷ್ಮಿ, ಸಿಎಸ್ ಸಿ ನೋಡಲ್ ಅಧಿಕಾರಿ ರತಿ, ಮೂಡುಕೊಣಾಜೆ ಒಕ್ಕೂಟದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಪದಾಧಿಕಾರಿಗಳು, ಸಿಎಸ್ ಸಿ ಸೇವಾದಾರರು, ಸಂಘದ ಸದಸ್ಯರು ಉಪಸ್ಥಿತರಿದ್ದರು.