ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ ಕೆರೆ ದೀಪೋತ್ಸವ, ಸಾಧಕರಿಗೆ ಸನ್ಮಾನ

ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ ಕೆರೆ ದೀಪೋತ್ಸವ, ಸಾಧಕರಿಗೆ ಸನ್ಮಾನ


ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಕಾರ್ತಿಕ ಹುಣ್ಣಿಮೆ ಲಕ್ಷ ದೀಪೋತ್ಸವ , ಕೆರೆ ದೀಪೋತ್ಸವ ಸಂದರ್ಭ ಶ್ರೀ ದೇವಿ ಭೂದೇವಿ ಸಹಿತ ವೆಂಕಟರಮಣ ದೇವರಿಗೆ ಪ್ರಾರ್ಥನೆ, ಪಂಚಾಮೃತಾಭಿಷೇಕ ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ ಅಪಾರ ಭಕ್ತ ವೃಂದದವರ ಭಾಗವಹಿಸುವಿಕೆಯಲ್ಲಿ ನೆರವೇರಿತು.

ಸಮಾರಾಧನೆಯ ಬಳಿಕ ಸಾಯಂಕಾಲ ಶ್ರೀದೇವಿ ಭೂದೇವಿ ಸಹಿತ ವೆಂಕಟರಮಣ ದೇವರು ಮತ್ತು ಶ್ರೀ ಗೋಪಾಲಕೃಷ್ಣ ದೇವರ ಪೇಟೆ ಉತ್ಸವ ನಡೆಯಿತು.

ನಂತರ ಶ್ರೀ ವೆಂಕಟರಮಣ ದೇವರು ಶ್ರೀ ದೇವಳದ ಕೆರೆಯ ದೇವರ ಕಟ್ಟೆಯಲ್ಲಿ ಆರೂಢರಾಗಿ, ಮಹಾಪೂಜೆ ನೆರವೇರಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ, ಸಂಘಟಕ,ವಿಮರ್ಶಕರಾಗಿ ಗುರುತಿಸಿಕೊಂಡಿರುವ ಎಂ ಶಾಂತಾರಾಮ ಕುಡ್ವ ಅವರನ್ನು ಹಾಗೂ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ, ಪತ್ರಕತ೯ ಎಂ ಗಣೇಶ್ ಕಾಮತ್ ಅವರನ್ನು ನವಶಕ್ತಿ  ಮಿತ್ರ ವೃಂದದ ಪರವಾಗಿ ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಗೌರವಿಸಿ ಸನ್ಮಾನಿಸಿದರು.  

ಆಡಳಿತ ಮೊಕ್ತೇಸರ  ಜಿ.ಉಮೇಶ್ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. 

ಎಸ್ ಎಸ್ ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

ಮೊಕ್ತೇಸರ, ಜಿಲ್ಲಾ ಹಿರಿಯ ಸಹಕಾರೀ ಧುರೀಣ  ಎಂ ದಯಾನಂದ ಪೈ,  ಶಿವಾನಂದ ಪ್ರಭು,ರಮಾನಾಥ ಭಟ್,ರಾಘವೇಂದ್ರ ಪ್ರಭು,ಜ್ಞಾನೇಶ್ವರ ಪೈ,ಮನೋಜ್ ಶೆಣೈ,ರಾಜೇಶ್ ಮಲ್ಯ,ರಘುವೀರ ಶೆಣೈ,ಮುರಳೀಧರ ಭಟ್, ಬೋಳ ವಿಶ್ವನಾಥ ಕಾಮತ್, ಸುಧೀರ್ ಪೈ ,ರಾಮದಾಸ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಂತರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article