ಮೂಡುಬಿದಿರೆ ವೆಂಕಟರಮಣ ದೇವಸ್ಥಾನದಲ್ಲಿ "ಸುಂದರಕಾಂಡ" ಹವನ

ಮೂಡುಬಿದಿರೆ ವೆಂಕಟರಮಣ ದೇವಸ್ಥಾನದಲ್ಲಿ "ಸುಂದರಕಾಂಡ" ಹವನ


ಮೂಡಬಿದಿರೆ: ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನ ಹಾಗೂ ವೆಂಕಟರಮಣ ಭಜನಾ ಮಂಡಳಿಯ  ಆಶ್ರಯದಲ್ಲಿ‌ ಅಖಂಡ ಏಕಾಹ ಭಜನಾ ಅಮೃತ ಮಹೋತ್ಸವದ ಅಂಗವಾಗಿ  ನಡೆಯುವ ಸುಂದರಕಾಂಡ ಹವನ ಗುರುವಾರ ಆರಂಭಗೊಂಡಿತು. 

ಪವನ್ ಭಟ್‌ ಅವರ ನೇತೃತ್ವದಲ್ಲಿ 12 ಮಂದಿ ಋತ್ವಿಜರು ಈ ಸುಂದರಕಾಂಡ ಹವನವನ್ನು ನೆರವೇರಿಸುತ್ತಿದ್ದು, ಇದು ಮೂರು ದಿನಗಳು ನಡೆಯಲಿದೆ.ಪ್ರತಿ ದಿನವೂ ವಿದ್ವಾನ್ ಅನಂತ ಕೃಷ್ಣ ಆಚಾರ್ಯರು ಅವರಿಂದ ಸುಂದರಕಾಂಡದ ಕುರಿತು ಪ್ರವಚನ ಕಾರ್ಯಕ್ರಮವೂ ನಡೆಯುತ್ತಿದೆ.

ಆಡಳಿತ ಮುಕ್ತೇಸರರಾದ ಜಿ. ಉಮೇಶ್ ಪೈ ದಂಪತಿಗಳ ನೇತೃತ್ವದಲ್ಲಿ ಈ ಹವನಕ್ಕೆ ಚಾಲನೆ ನೀಡಲಾಯಿತು.

ದೇವಾಲಯದ  ಮುಕ್ತೇಸರರು, ಟ್ರಸ್ಟ್‌ನ ಸದಸ್ಯರುಗಳು, ಭಜನಾ ಮಂಡಳಿಯ ಅಧ್ಯಕ್ಷ ತುಕಾರಾಮ ಮಲ್ಯ ಮತ್ತು ಸದಸ್ಯರು ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article