ಮಕ್ಕಳ ನೈಜ ಪ್ರತಿಭೆಯ ಅನಾವರಣವೇ ಪ್ರತಿಭಾ ಕಾರಂಜಿ: ಶಾಲಿನಿ ಕೆ. ಸಾಲ್ಯಾನ್
Thursday, November 27, 2025
ಮೂಡುಬಿದಿರೆ: ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಪ್ರತಿಭೆ ಅರಳುತ್ತದೆ. ಮಕ್ಕಳ ನೈಜ ಪ್ರತಿಭೆಯ ಅನಾವರಣವೇ ಪ್ರತಿಭಾ ಕಾರಂಜಿ ಎಂದು ತೆಂಕಮಿಜಾರು ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್ ಹೇಳಿದರು.
ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲಮುಂಡ್ಕೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪಲತಾ, ಗ್ರಾಮ ಪಂಚಾಯತ್ ಸದಸ್ಯೆ ಗೀತಾ, ಪಿ.ಡಿ.ಓ ರೋಹಿಣಿ, ಕೆ.ಪಿ.ಎಸ್. ಪ್ರಾಂಶುಪಾಲ ಚಂದ್ರು, ಪೋಷಕ ಸಮಿತಿಯ ಪದಾಧಿಕಾರಿಗಳಾದ ರಮಾನಂದ, ಫೌಜಿಯ, ಅಶ್ರಫ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ದೊರೆಸ್ವಾಮಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ರಾಮಕೃಷ್ಣ ಶಿರೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್ ಸಾಲಿಯಾನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿನ್ನಿ ಫ್ರೆಡ್ ಪಿಂಟೊ, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಮತ್ತು ನಾಗೇಶ್,
ಎಸ್.ಡಿ.ಎಂ.ಸಿ ಅಧ್ಯಕ್ಷ ಇಕ್ಬಾಲ್, ಶಿಕ್ಷಣ ಸಂಯೋಜಕ ರಾಜೇಶ್, ಜ್ಯೋತಿನಗರ ಕ್ಲಸ್ಟರ್ ಸಿ. ಆರ್. ಪಿ. ಮಹೇಶ್ವರಿ, ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ, ಪ್ರೇಮ ಉಪಸ್ಥಿತರಿದ್ದರು.