ಉಪನ್ಯಾಸಕಿ ರುಚಿಕಾ ರೋಶನ್ ಗೆ ಡಾಕ್ಟರೇಟ್ ಪದವಿ

ಉಪನ್ಯಾಸಕಿ ರುಚಿಕಾ ರೋಶನ್ ಗೆ ಡಾಕ್ಟರೇಟ್ ಪದವಿ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರುಚಿಕಾ ರೋಶನ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. 

ಆಳ್ವಾಸ್ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ `ಪಶ್ಚಿಮ ಘಟ್ಟ ಪ್ರದೇಶಗಳ ಕಾಡು ಮಾವಿನ ಪ್ರಭೇದಗಳ ಆನುವಂಶಿಕ ವ್ಯತ್ಯಾಸದ ಮೌಲ್ಯಮಾಪನ' ಮಹಾಪ್ರಬಂಧ ಮಂಡಿಸಿದ್ದರು. 

ರುಚಿಕಾ ಅವರು ಬಂಟ್ವಾಳ ತಾಲೂಕಿನ ವಾಮದಪದವು ಪಿಲಿಮೊಗರು ಗ್ರಾಮದ ಜಿನ್ನಪ್ಪ ಪೂಜಾರಿ-ಲೀಲಾವತಿ ದಂಪತಿಯ ಪುತ್ರಿ. ಕಾರ್ಕಳ ಪತ್ತೊಂಜಿಕಟ್ಟೆಯ  ವಿಠಲ್ ಎಂ. ಸಾಲ್ಯಾನ್- ವಸಂತಿ ವಿ. ಅವರ ಸೊಸೆ ಹಾಗೂ ರೋಶನ್ ಸಾಲ್ಯಾನ್ ಅವರ ಪತ್ನಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article