ಜ್ಞಾನ ವಿಕಾಸ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ: ಶ್ರದ್ದಾ ಅಮಿತ್

ಜ್ಞಾನ ವಿಕಾಸ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ: ಶ್ರದ್ದಾ ಅಮಿತ್


ಮೂಡುಬಿದಿರೆ: ಗ್ರಾಮೀಣ ಪ್ರದೇಶದ ಮಹಿಳೆಯರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಬಲೀಕರಣ ಮಾಡುವ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮಗಳು ಮಹತ್ತರ ಪಾತ್ರವನ್ನು ವಹಿಸಿದೆ ಎಂದು ಬೆಂಗಳೂರು ಕ್ಷೇಮವನದ ಕಾರ್ಯನಿರ್ವಹಣಾಧಿಕಾರಿ ಶೃದ್ಧಾ ಅಮಿತ್  ಹೇಳಿದರು.


ಅವರು ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಬಡಕೋಡಿಯಲ್ಲಿ  ಸೋಮವಾರ ನಡೆದ ಜ್ಞಾನವಿಕಾಸ ಸದಸ್ಯರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   


ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆಯಿಂದ ಹೊರಗಡೆ ಬಂದು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆಯುವಂತಾಗಿದೆ. ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಂಡು ಆರ್ಥಿಕ ನೆರವಿನ ಸದ್ಬಳಕೆಯನ್ನು  ವಿವೇಚನಯುತವಾಗಿ ಬಳಸಿಕೊಂಡು ಕುಟುಂಬದ ಅಭಿವೃದ್ದಿಯನ್ನು ಇಂದು ಕಾಣುವಂತಾಗಿದೆ ಎಂದು ತಿಳಿಸಿದರು. 

ಕಾರ್ಯಕಮದಲ್ಲಿ ಪ್ರಬುದ್ದ ಕೇಂದ್ರ ಸದಸ್ಯರಾದ ರಾಜೀವಿ ಮತ್ತು  ವಸಂತಿ ಅವರು ಕೇಂದ್ರಕ್ಕೆ ಸೇರಿಕೊಂಡ ನಂತರ ಮನೆಯಲ್ಲಿ ಆದ ಪರಿವರ್ತನೆಯ ಬಗ್ಗೆ ಅನಿಸಿಕೆಯನ್ನು ವ್ಯಕಪಡಿಸಿದರು. 

ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟಿಗಳಾದ ಸಂಪತ್‌  ಸಾಮ್ರಾಜ್ಯ, ಪ್ರಾದೇಶಿಕ ನಿರ್ದೇಶಕರರಾದ ಆನಂದ ಸುವರ್ಣ, ಗ್ರಾಮ ಪಂಚಾಯತ್ ಅದ್ಯಕ್ಷ ಉದಯ್‌, ಜನಜಾಗೃತಿ ವೇದಿಕೆಯ ಲಕ್ಷ್ಮಣ ಸುವರ್ಣ, ಮಹಾವೀರ ಹೆಗ್ಡೆ , ಮುನಿರಾಜ್‌ ಹೆಗ್ಡೆ ಗಣ್ಯರಾದ ಜಯಂತ ಹೆಗ್ಡೆ, ವೇದ ಕುಮಾರ್‌ ಜೈನ್‌, ವಿಶ್ವನಾಥ ಕೋಟ್ಯಾನ್‌, ನಿರ್ದೇಶಕ ದಿನೇಶ್‌, ಯೋಜನಾಧಿಕಾರಿ ಧನಂಜಯ್‌, ಜ್ಞಾನವಿಕಾಸ ಸಮಾನ್ವಯಾಧಿಕಾರಿ  ವಿದ್ಯಾ, ಶಿರ್ತಾಡಿ ವಲಯದ ಮೇಲ್ವಿಚಾರಕಿ ಪುಷ್ಪ, ಒಕ್ಕೂಟದ ಅದ್ಯಕ್ಷ ಶೇಖರ್‌ ಪೂಜಾರಿ , ರವಿ ಎನ್. ಶೋಭಾ, ಸುಕೇಶ್  ಹಾಗೂ ಜ್ಞಾನವಿಕಾಸದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರಬುದ್ದ ಕೇಂದ್ರದ ಸದಸ್ಯೆ ಜಾನಿ  ಪಾರ್ದನ ಹಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article