ಅಭಿವೃದ್ಧಿಯ ಪಥದತ್ತ ತೆಂಕಮಿಜಾರು ಗ್ರಾಮ ಪಂಚಾಯತ್

ಅಭಿವೃದ್ಧಿಯ ಪಥದತ್ತ ತೆಂಕಮಿಜಾರು ಗ್ರಾಮ ಪಂಚಾಯತ್

ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ಕೋಟ್ಯಾನ್ 


ಮೂಡುಬಿದಿರೆ: ತೆಂಕ ಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದೀಗ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾಪ೯ಣೆಗೊಳಿಸಲಾಗಿದ್ದು ಇನ್ನು ಹೆಚ್ಚಿನ ಬೇಡಿಕೆಗಳಿದ್ದು ಆ ಕಾಮಗಾರಿಗಳನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಪಥದತ್ತ ಸಾಗಿಸಲಾಗುವುದು ಎಂದು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. 


ಅವರು ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕುಮೇರಿನಲ್ಲಿ ನಿಮಿ೯ಸಲಾಗಿರುವ ಬಸ್ ಸ್ಟ್ಯಾಂಡ್, ಕೊಪ್ಪದ ಕುಮೇರು ಮತ್ತು ವಂಟಿಮಾರು ಅಂಗನವಾಡಿ ಕೇಂದ್ರ, ಅಶ್ವತ್ಥಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಂಚಾಯತ್ ನಲ್ಲಿ  ಲೈಬ್ರೆರಿಯನ್ನು ಸೋಮವಾರ ಲೋಕಾಪ೯ಣೆಗೊಳಿಸಿ ಮಾತನಾಡಿದರು. 


ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಊರಿನ ಹಿರಿಯರಾದ ರಘುನಾಥ ಭಟ್ ಅವರು ಭಾಗವಹಿಸಿ ಮಾತನಾಡಿ ಸದಸ್ಯರ ಮುತುವಜಿ೯ ಹಾಗೂ ಶಾಸಕರು ಸರಕಾರದಿಂದ ತಂದ ಅನುದಾನದಿಂದಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಸಾಧ್ಯವಾಗಿದೆ. ಶಾಸಕರ ಸಹಕಾರದಿಂದ  ವಂಟಿಮಾರಿನ ಕೊಲ್ಲೊಟ್ಟು ಎಂಬಲ್ಲಿ ಮನೆಗಳ ನಿಮಾ೯ಣವಾಗಿದೆ ಇದೀಗ ಅಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಅದನ್ನು ಆದಷ್ಟು ನಿವಾರಿಸಬೇಕೆಂದು ಶಾಸಕರಲ್ಲಿ ಆಗ್ರಹಿಸಿದರು. 

ಬಿಜೆಪಿ ಮಂಡಲದ ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ ತೋಡಾರು, ಗ್ರಾ. ಪಂ. ಸದಸ್ಯರಾದ ರುಕ್ಮಿಣಿ, ಜಯಲಕ್ಷ್ಮೀ ಶೆಟ್ಟಿಗಾರ್, ವಿದ್ಯಾನಂದ ಶೆಟ್ಟಿ, ಮಹೇಶ್, ದಿನೇಶ್ ಭಟ್, ಜಯಲಕ್ಷ್ಮೀ, ನಿಶಾ ಶೆಟ್ಟಿ, ಲಿಂಗಪ್ಪ ಗೌಡ, ಲಕ್ಷ್ಮೀ, ದಿನೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಶುಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಇದೇ ಸಂದಭ೯ದಲ್ಲಿ ಬಡಗಮಿಜಾರು ಅಂಗನವಾಡಿ ಕೇಂದ್ರ ಹಾಗೂ ಗರಡಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ, ಕಾಯ೯ದಶಿ೯ ರಮೇಶ್ ಬಂಗೇರಾ, ಕೊಪ್ಪದ ಕುಮೇರು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ಯಾಮಲಾ, ಅಂಗನವಾಡಿ ಕಾಯ೯ಕತೆ೯ಯರಾದ ಕವಿತಾ, ಹೇಮಾವತಿ, ದೀಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article