ಗ್ರಾ.ಪಂ. ಸದಸ್ಯ ವಿದ್ಯಾನಂದಶೆಟ್ಟಿಗೆ, ಆಶಾ ಕಾಯ೯ಕತೆ೯ಯರಿಗೆ ಸನ್ಮಾನ
Monday, November 24, 2025
ಮೂಡುಬಿದಿರೆ: ಕೊಪ್ಪದ ಕುಮೇರು ಅಂಗನವಾಡಿ ಕೇಂದ್ರದ ನಿಮಾ೯ಣದಲ್ಲಿ ಮುತುವಜಿ೯ ವಹಿಸಿರುವ ಶಾಲೆಯ ಹಳೆ ವಿದ್ಯಾಥಿ೯, ತೆಂಕಮಿಜಾರು ಗ್ರಾ.ಪಂ. ಸದಸ್ಯ ವಿದ್ಯಾನಂದ ಶೆಟ್ಟಿ ಅವರನ್ನು ಪೋಷಕರು ಸೋಮವಾರ ಸನ್ಮಾನಿಸಿದರು.
ಗೌರವ: ನಿವೃತ್ತಿ ಹೊಂದಿರುವ ಅಂಗನವಾಡಿ ಕಾಯ೯ಕತೆ೯ ಬೇಬಿ, ಆಶಾ ಕಾಯ೯ಕತೆ೯ಯರಾದ ಯಶೋಧ ಮತ್ತು ಬೇಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕ ಉಮಾನಾಥ ಎ. ಕೋಟ್ಯಾನ್, ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಸದಸ್ಯರಾದ ರುಕ್ಮಿಣಿ, ಮಹೇಶ್, ಲಕ್ಷ್ಮೀ, ಮಂಡಲ ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ ತೋಡಾರು,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ, ಕಾಯ೯ದಶಿ೯ ರಮೇಶ್ ಬಂಗೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲ್ಲಮುಂಡ್ಕೂರು ವಲಯದ ಮೇಲ್ವೀಚಾರಕಿ ಶುಭ, ಶಿಕ್ಷಕಿ ಶ್ಯಾಮಲಾ, ಅಂಗನವಾಡಿ ಕಾಯ೯ಕತೆ೯ಯರಾದ ಹೇಮಾವತಿ, ದೀಕ್ಷಿತಾ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.
