ಬಿಹಾರದಲ್ಲಿ ಬಿಜೆಪಿ ಜಯಭೇರಿ: ಮೂಡುಬಿದಿರೆ ಮಂಡಲದಿಂದ ವಿಜಯೋತ್ಸವ

ಬಿಹಾರದಲ್ಲಿ ಬಿಜೆಪಿ ಜಯಭೇರಿ: ಮೂಡುಬಿದಿರೆ ಮಂಡಲದಿಂದ ವಿಜಯೋತ್ಸವ


ಮೂಡುಬಿದಿರೆ: ಬಿಹಾರದಲ್ಲಿ ಬಿಜೆಪಿಯು ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಮುಲ್ಕಿ-ಮೂಡಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಅವರ ನೇತೃತ್ವದಲ್ಲಿ ಶುಕ್ರವಾರ ಸಂಜೆ ಬಸ್ ನಿಲ್ದಾಣದ ಆವರಣದಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು.


ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್ ಆಳ್ವ, ಈಶ್ವರ್ ಕಟೀಲ್, ಶಾಂತಿಪ್ರಸಾದ್ ಹೆಗ್ಡೆ, ಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ, ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ,  ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ,  ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್‌,  ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ, ಮಂಡಲ ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಅಮೀನ್, ಪ್ರ. ಕಾಯ೯ದಶಿ೯ ನಾಗೇಶ್ ಇರುವೈಲು,  ಪ್ರಮುಖರಾದ ಸುಕೇಶ್ ಶೆಟ್ಟಿ ಎದಮಾರು, ಸೋಮನಾಥ ಕೋಟ್ಯಾನ್, ಶಕ್ತಿ ‌ಕೇಂದ್ರದ ಪ್ರಮುಖರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article