ಸಂತ ಫಿಲೋಮಿನಾ ಕಾಲೇಜಿನ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳಿಗೆ ಕೆಎಂಎಫ್ ಹಾಗೂ ವಿವಿಧೆಡೆಗೆ ಓರಿಯೆಂಟೇಷನ್ ಭೇಟಿ
Friday, November 14, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗವು ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳಿಗೆ ಕೆಎಂಎಫ್ ಹಾಗೂ ವಿವಿಧೆಡೆಗೆ ಓರಿಯೆಂಟೇಷನ್ ಭೇಟಿ ನೀಡಿದರು.
ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗವು ವಿದ್ಯಾರ್ಥಿಗಳಿಗೆ ಸಮಾಜ ಕಾರ್ಯ ಕೋರ್ಸನ ಕಾರ್ಯ ಕ್ಷೇತ್ರದ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ವಿವಿಧೆಡೆ ಒರಿಯೆಂಟೇಷನ್‌ಗಳ ಬಗ್ಗೆ ತಿಳಿದುಕೊಂಡರು.
ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸಚಿನ್ ಅವರು ವಿವರವಾಗಿ ಮಾಹಿತಿ ನೀಡಿದರು.
ಮಂಗಳೂರಿನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ ಮತ್ತು ಎಸ್‌ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಸ್ಕೂಲ್, ವಾಮಂಜೂರ್ ಹಾಗೂ ಪುತ್ತೂರಿನ ಪತ್ರಾವೋ ಆಸ್ಪತ್ರೆ, ಸಾಂತ್ವನ ಕೇಂದ್ರ ಮುಂತಾದೆಡೆ ಮಾಹಿತಿಯುಕ್ತ ಭೇಟಿ ಮಾಡಲಾಯಿತು.
ವಿಭಾಗದ ಉಪನ್ಯಾಸಕರಾದ ಪ್ರತಿಭಾ, ಶೀತಲ್ ಕುಮಾರ್ ಹಾಗೂ ಸಂಯೋಜಕಿ ಶ್ರೀಮಣಿ ಭಾಗಿಯಾಗಿದ್ದರು.
