ರಾಷ್ಟ್ರೀಯ ವಾಣಿಜ್ಯೋದ್ಯಮ ದಿನ ಮತ್ತು ಹಣಕಾಸು ಜ್ಞಾನ ಕಾರ್ಯಾಗಾರ
Tuesday, November 18, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ವಾಣಿಜ್ಯ ನಿರ್ವಹಣಾ ವಿಭಾಗದ ವತಿಯಿಂದ ರಾಷ್ಟ್ರೀಯ ವಾಣಿಜ್ಯೋದ್ಯಮ ದಿನಾಚರಣೆ ಹಾಗೂ ಹಣಕಾಸು ಜ್ಞಾನ ಮತ್ತು ಉದ್ಯಮಶೀಲತೆ ಕುರಿತು ಕಾರ್ಯಾಗಾರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಎಂ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಎಚ್‌ಎಸ್ಬಿಸಿ ಮ್ಯೂಚುಯಲ್ ಫಂಡ್‌ನ ತರಬೇತುದಾರ ಅರ್ಜುನ್ ಪ್ರಕಾಶ್ ಭಾಗವಹಿಸಿ, ಹಣಕಾಸು ಜ್ಞಾನ, ಹೂಡಿಕೆ ಅರಿವು, ಉಳಿತಾಯ ಪದ್ಧತಿ ಹಾಗೂ ಆಧುನಿಕ ಆರ್ಥಿಕತೆಯಲ್ಲಿ ಉದ್ಯಮಶೀಲತೆಯ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ರಾಧಾಕೃಷ್ಣ ಗೌಡ ವಿ. ಅವರು ಯುವಜನರಲ್ಲಿ ಹಣಕಾಸು ಶಿಕ್ಷಣದ ಅಗತ್ಯತೆಯನ್ನು ಉಲ್ಲೇಖಿಸಿದರು. ಕಾರ್ಯಕ್ರಮವನ್ನು ಮ್ಯಾನೇಜ್ಮೆಂಟ್ ಅಸೋಸಿಯೇಶನ್‌ನ ಸಂಯೋಜಕಿ ಪುಷ್ಪಾ ಎನ್. ಯಶಸ್ವಿಯಾಗಿ ಆಯೋಜಿಸಿದರು.
ಪ್ರಶಾಂತ್ ರೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಮುಹಮ್ಮದ್ ಅಫ್ನಾನ್ (ತೃತೀಯ ಬಿಬಿಎ) ವಂದಿಸಿದರು. ಅಧ್ಯಾಪಕರಾದ ಅಭಿಷೇಕ್ ಸುವರ್ಣ, ಶ್ರುತಿ ಎಂ.ಎಸ್., ಹಾಗೂ ಸಿಂಚನಾ ಕೆ.ಎನ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಹಣಕಾಸು ಯೋಜನೆ ಮತ್ತು ಉದ್ಯಮ ಕೌಶಲ್ಯಗಳ ಕುರಿತು ಅಮೂಲ್ಯ ತಿಳುವಳಿಕೆಯನ್ನು ಪಡೆದರು.
