ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ವಿದ್ಯಾರ್ಥಿಗಳು ನ್ಯಾಯ, ವಿವೇಕ, ಧೈರ್ಯ ಮತ್ತು ಸಂಯಮ ಎಂಬ ನಾಲ್ಕು ಗುಣಗಳನ್ನು ಅಳವಡಿಸಿಕೊಳ್ಳಬೇಕು. ಈ ಪದಗಳು ನಮ್ಮ ಜೀವನವನ್ನು ಬೆಳಗಿಸುವ ದೀಪಗಳು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಮಾತನಾಡಿ, ‘ಈ ರೀತಿಯ ಕಾರ್ಯಕ್ರಮಗಳು ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಹಿಂಜರಿಕೆಯನ್ನು ಹೋಗಲಾಡಿಸುತ್ತವೆ. ನಮ್ಮ ಸುತ್ತುಮುತ್ತಲಿನ ಪ್ರತಿಯೊಂದು ವಸ್ತುವೂ ಸ್ಮಾರ್ಟ್ ಆಗಿರುವಂತಹ ಈ ಕಾಲಘಟ್ಟದಲ್ಲಿ ನಾವು ಸಹ ಸ್ಮಾರ್ಟ್ ಆಗಬೇಕಾಗಿದೆ. ಕಾಲೇಜಿನಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಥಮ ಎಂಸಿಎ ವಿದ್ಯಾರ್ಥಿಗಳಾದ ನಿಶ್ಮಿತಾ ಹಾಗೂ ರಂಜನ್ ಅವರನ್ನು ಎಂಸಿಎ ವಿಭಾಗದ ಡೀನ್ ಡಾ. ವಿನಯಚಂದ್ರ ಮೂಲಕ ನೀಡುವ ಮೂಲಕ ಸ್ವಾಗತಿಸಿದರು. ಪ್ರಥಮ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಂಜನ್ ಎಸ್., ಶ್ರಾವ್ಯ ಕೆ., ಸಯ್ಯದ್ ಮಹಮ್ಮದ್ ಮಹಶ್ಶಾಮ್ ಹಾಗೂ ಪ್ರಥಮ ಎಂಸಿಎ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ದ್ವಿತೀಯ ಎಂಸಿಎ ವಿದ್ಯಾರ್ಥಿನಿಯರಾದ ಚೈತನ್ಯ ಹಾಗೂ ಅಪೂರ್ವ ಇವರನ್ನು ಈ ಸಂದರ್ಥಬದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಲೇಜಿನ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಬಿ. ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಿರೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವರೂ, ಎಂಸಿಎ ವಿಭಾಗದ ಡೀನ್ ಡಾ. ವಿನಯಚಂದ್ರ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು.
ದ್ವಿತೀಯ ಎಂಸಿಎ ವಿದ್ಯಾರ್ಥಿನಿ ಶಿಲ್ಪಾ ವಂದಿಸಿದರು. ದ್ವಿತೀಯ ಎಂಸಿಎ ವಿದ್ಯಾರ್ಥಿನಿ ಅಪೂರ್ವ ಕಾರ್ಯಕ್ರಮ ನಿರೂಪಿಸಿದರು.
ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ನೀಲಮ್ ಕುಟ್ಟಪ್ಪ ಉಪಸ್ಥಿತರಿದ್ದರು. ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಶೋಧನ್ ಪಿ.ಜಿ. ಸಹಕರಿಸಿದರು. ನಂತರ ಪ್ರಥಮ ಹಾಗೂ ದ್ವಿತೀಯ ವರಷದ ಎಂಸಿಎ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
