ಬಿಳಿಮಲೆಯನ್ನು ಪದವಿಯಿಂದ ಉಚ್ಚಾಟಿಸಿ: ಬಿ.ವೈ ವಿಜಯೇಂದ್ರ
ಪುತ್ತೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರಾವಳಿಯ ಕಲಾಪ್ರಕಾರವಾದ ಯಕ್ಷಗಾನದ ಬಗ್ಗೆ ಅಭಿಮಾನವಿದ್ದರೆ ಯಕ್ಷಗಾನದ ಕಲಾವಿದರ ಬಗ್ಗೆ ವಿವಾದ್ಮಾತಕ ಹೇಳಿಕೆ ನೀಡಿ ಅಪಮಾನ ಮಾಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರನ್ನು ತಕ್ಷಣ ಅಧ್ಯಕ್ಷ ಪದವಿಯಿಂದ ಕಿತ್ತೊಗೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಬುಧವಾರ ಪುತ್ತೂರಿನಲ್ಲಿ ಮಾದ್ಯಮಗಳೊಂದಿಗೆ ಅವರು ಮಾತನಾಡಿ, ಕರಾವಳಿಯ ಕಲಾಪ್ರಕಾರದ ಬಗ್ಗೆ ಕೀಳಾಗಿ ಮಾತನಾಡಿರುವ ಬಿಳಿಮಲೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಯಕ್ಷಗಾನ ಕಲೆಯ ಬಗ್ಗೆ ಇರುವಂತಹ ತಾತ್ಸಾರವನ್ನು ಬಿಳಿಮಲೆಯ ಮೂಲಕ ತೋರಿಸಿದೆ. ಅವರು ಯಕ್ಷಗಾನ, ಯಕ್ಷಗಾನ ಕಲಾವಿದರಿಗೆ ಮಾತ್ರವಲ್ಲ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪದವಿಯಿಂದ ಅವರನ್ನು ಉಚ್ಛಾಟನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅತೀ ಶೀಘ್ರದಲ್ಲಿ ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಕಾರ್ಯಕ್ರಮ ಇದೆ. ಈ ಕುರಿತು ಇಂದು ಉಡುಪಿಯಲ್ಲಿ ಸಭೆ ನಡೆಯಲಿದೆ. ಉಡುಪಿಯ ಜನಪ್ರತಿನಿಧಿಗಳು ಹಾಗೂ ಬಿಜೆಪಿ ಮುಖಂಡರ ಜತೆಗೆ ಮಾತುಕತೆ ನಡೆಸಲಿದ್ದೇನೆ. ಈ ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.