ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅವಬೃತೋತ್ಸವ ನೌಕಾ ವಿಹಾರ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅವಬೃತೋತ್ಸವ ನೌಕಾ ವಿಹಾರ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ  ಮಹೋತ್ಸವದ ಅಂಗವಾಗಿ ನವೆಂಬರ್ 27 ಗುರುವಾರದಂದು ಮಾರ್ಗಶಿರ ಶುದ್ಧ ಸಪ್ತಮಿಯoದು  ಬೆಳಿಗ್ಗೆ ಕುಮಾರಧಾರ ನದಿಯಲ್ಲಿ ಶ್ರೀದೇವರ ಅವಬ್ರತೋತ್ಸವ ಮತ್ತು ನೌಕಾ ವಿಹಾರ ನಡೆದಿರುತ್ತದೆ. 

ಅದಕ್ಕೂ ಮೊದಲು ಶ್ರೀ ದೇವಳದಲ್ಲಿ ಓಕುಳಿ ಪೂಜೆ,ಹಾಗೂ ಓಕುಳಿ ಸಂಪ್ರೋಕ್ಷಣೆ ನಡೆದು ಬಳಿಕ ಶ್ರೀ ದೇವರು ರಥಬೀದಿಯಾಗಿ ಕುಮಾರ ಸ್ನಾನಘಟ್ಟ ದವರೆಗೆ ಬಂದು ಕುಮಾರಧಾರ ನದಿಯಲ್ಲಿ ಮಾವು ಬಾಳೆಗಳನ್ನೊಳಗೊಂಡು, ತಳಿರು ತೋರಣ ಮತ್ತು ಹೂಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ಶ್ರೀ ಸ್ವಾಮಿಯ  ನೌಕಾವಿಹಾರ ನಡೆದಿರುತ್ತದೆ. ತದನಂತರ ಶ್ರೀ ದೇವರಿಗೆ ಶ್ರೀ ದೇವಳದ ಪ್ರಧಾನ ಅರ್ಚಕರನ್ನೊಳಗೊಂಡ ತಂಡದಿಂದ ಮಂತ್ರ ಘೋಷಗಳೊಂದಿಗೆ ಅವಬ್ರತ ನಡೆದಿರುತ್ತದೆ. ಅವಬ್ರತೋತ್ಸವದ ಬಳಿಕ ಕುಮಾರಧಾರ ನದಿ ತೀರದ ಕಟ್ಟೆಯಲ್ಲಿ ಪೂಜೆ ನಡೆದು ಕುಮಾರಧಾರ ಸ್ಥಾನಗಟ್ಟದಿಂದ ರಥಬೀದಿಯಾಗಿ ಶ್ರೀ ದೇವಳದವರೆಗೆ ರಥ ಬರುವ ಸಂದರ್ಭದಲ್ಲಿ ಊರಿನ ಭಕ್ತರು,ವ್ಯಾಪಾರಸ್ಥರು, ರಸ್ತೆ ಬದಿ ಕಟ್ಟಡ ಕಚೇರಿಯವರು  ದಾರಿಯುವುದಕ್ಕೂ ಶ್ರೀ ದೇವರಿಗೆ ಆರತಿ ಸಮರ್ಪಣೆ ಮಾಡಿರುತ್ತಾರೆ.

 ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ಕಾರ್ಯನಿರ್ವಹಣಾಧಿಕಾರಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮಾಸ್ಟರ್ ಪ್ಲಾನ್ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರು ಜಿಲ್ಲಾ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರುಗಳು ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳು ದಾನಿಗಳು  ದೇವಳದ ಸಿಬ್ಬಂದಿ ವರ್ಗದವರು ಭದ್ರತಾ ಸಿಬ್ಬಂದಿ ವರ್ಗದವರು ಊರವರು ಹಾಗೂ ಸಹಸ್ರಾರು ಭಕ್ತರು ನೆರೆದಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article