ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್ ಆಯ್ಕೆ
Wednesday, November 19, 2025
ಸುಳ್ಯ: ಮಂಗಳೂರು ವಿಭಾಗದ ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ 2025-26 ಅಧ್ಯಕ್ಷರಾಗಿ ಸುಳ್ಯದ ಮುಳಿಯ ಸಾತ್ವಿಕ್ ಆಯ್ಕೆಯಾಗಿದ್ದಾರೆ.
ಆನ್‌ಲೈನ್ ವೋಟಿಂಗ್ ಮೂಲಕ ಚುನಾವಣೆ ನಡೆದಿತ್ತು.ಮಂಗಳೂರು ವಿಭಾಗವು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಈ ಮೂರು ಜಿಲ್ಲೆಗಳನ್ನೊಳಗೊಂಡ ಶೈಕ್ಷಣಿಕ ವಲಯವಾಗಿದೆ. ಸಾತ್ವಿಕ್ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಸ್ಟುಡೆಂಟ್ ಫೋರಂ ಅಧ್ಯಕ್ಷರೂ ಆಗಿದ್ದಾರೆ.
ಯುವಕೇಂದ್ರಿತ ಕಾರ್ಯಕ್ರಮಗಳು, ಸಮುದಾಯಮುಖಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದಾರೆ. ಸುಳ್ಯ ತಾಲೂಕಿನ ಗುತ್ತಿಗಾರಿನವರಾದ ಮುಳಿಯ ಸಾತ್ವಿಕ್ ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ಹಾಗೂ ಪಲ್ಲವಿ ದಂಪತಿಗಳ ಪುತ್ರ.