ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಶ್ರಿನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ: ಸುಳ್ಯದಲ್ಲಿ ಪೂರ್ವಭಾವಿ ಸಭೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಶ್ರಿನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ: ಸುಳ್ಯದಲ್ಲಿ ಪೂರ್ವಭಾವಿ ಸಭೆ


ಸುಳ್ಯ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಸಾರಥ್ಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ನ.29 ಮತ್ತು 30ರಂದು 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವ ನಡೆಯಲಿದೆ. ಇದರ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸುಳ್ಯದ ಕಲ್ಕುಡ ದೈವಸ್ಥಾನದ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮದ ಕುರಿತು ವಿವರ ನೀಡಿದರು.

ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಸಹ ಸಂಚಾಲಕರಾದ ಉಮೇಶ್ ಕೋಡಿಬೈಲು, ರವಿಕುಮಾರ್ ರೈ, ಸ್ವಾಗತ ಸಮಿತಿಯ ಅಧ್ಯಕ್ಷ ಭೀಮಯ್ಯ ಭಟ್, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ಪ್ರಜ್ವಲ್ ಘಾಟೆ, ಸುಳ್ಯದ ಪ್ರಮುಖರಾದ ಸುಧಾಕರ.ಬಿ ಬಾಟೋಳಿ, ಮಹೇಶ್ ಉಗ್ರಾಣಿಮನೆ, ತಿಮ್ಮಪ್ಪ ನಾವೂರು, ಸೋಮನಾಥ ಪೂಜಾರಿ,ನಂದನ್, ಸಾತ್ವಿಕ್, ಮಹೇಶ್ ಮೇರ್ಕಜೆ, ಸಂತೋಷ್ ತೊಡಿಕಾನ, ಅರುಣ್ ಸುಳ್ಯ, ಆನಂದ ಕೋಲ್ಚಾರ್, ದೀತೇಶ್ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ ವಲಯ ಸಮಿತಿ ರಚನೆ:

ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವದ ಯಶಸ್ವಿಗೆ ಸುಳ್ಯ ವಲಯ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಪಿ.ಕೆ.ಉಮೇಶ್,ಸೋಮನಾಥ ಪೂಜಾರಿ, ಅಧ್ಯಕ್ಷರಾಗಿ ಸುಧಾಕರ ಬಿ. ಬಾಟೋಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಸಾತ್ವಿಕ್, ಸಂತೋಷ್ ತೊಡಿಕಾನ, ಉಪಾಧ್ಯಕ್ಷರಾಗಿ ದೀಪಕ್ ಗೂನಡ್ಕ, ಸುಧೀರ್ ಉಗ್ರಾಣಿಮನೆ, ದಿತೇಶ್ ರಾವ್, ಮಹೇಶ್ ಉಗ್ರಾಣಿಮನೆ, ಮಹೇಶ್ ಮೇರ್ಕಜೆ, ಕಾರ್ಯದರ್ಶಿಗಳಾಗಿ ಅರುಣ್, ನಂದನ್, ಆನಂದ ಕೋಲ್ಚಾರ್, ಮನೋಜ್ ಪಾತಿಕಲ್ಲು ಅವರನ್ನು ಆಯ್ಕೆ ಮಾಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article