ಧರ್ಮಸ್ಥಳ ಯಕ್ಷಗಾನ ಮಂಡಳಿ: ಸೇವಾ ಬಯಲಾಟ ಪ್ರದರ್ಶನ ಪ್ರಾರಂಭ

ಧರ್ಮಸ್ಥಳ ಯಕ್ಷಗಾನ ಮಂಡಳಿ: ಸೇವಾ ಬಯಲಾಟ ಪ್ರದರ್ಶನ ಪ್ರಾರಂಭ


ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸೇವಾ ಬಯಲಾಟ ಪ್ರದರ್ಶನಗಳು ಭಾನುವಾರ ರಾತ್ರಿ ಪುಂಜಾಲಕಟ್ಟೆಯಿಂದ ಆರಂಭವಾಗಿದ್ದು ಮೇಳದ ಶ್ರೀ ಮಾಹಾಗಣಪತಿ ದೇವರ ಮೂರ್ತಿಯನ್ನು ಛತ್ರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಭಾನುವಾರ ಬೆಳಗ್ಗೆ ಗಂಟೆ 8.15ರ ಶುಭ ಮುಹೂರ್ತದಲ್ಲಿ ‘ಮಂಜುಕೃಪಾ’ದಲ್ಲಿ ವಿರಾಜಮಾನಗೊಳಿಸಲಾಯಿತು.

ಅಲ್ಲಿ ಮಧ್ಯಾಹ್ನ ಗಣಹೋಮ, ಮಹಾಪೂಜೆ ಹಾಗೂ ಸಂಜೆಯ ಪೂಜೆ ನೆರವೇರಿಸಿ ಪೂಂಜಾಲಕಟ್ಟೆಯಲ್ಲಿ ಸೇವಾ ಬಯಲಾಟ ಪ್ರದರ್ಶನದ ಸ್ಥಳಕ್ಕೆ ಭವ್ಯ ಮೆರವಣಿಗೆಯಲ್ಲಿ ಕೊಂಡು ಹೋಗಲಾಯಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಮೇಳದ ಸಿಬ್ಬಂದಿ ಹಾಗೂ ಕಲಾವಿದರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article