ನ.25 ರಂದು ಪಣೋಲಿ ಬೈಲ್‌ನಲ್ಲಿ ವರ್ಷಾವಧಿಕೋಲ
ಬಂಟ್ವಾಳ: ಜಿಲ್ಲೆಯ ಪ್ರಸಿದ್ದ ಕಾರಣಿಕ ದೈವಸ್ಥಾನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲವು ನ.25ರಂದು ಮಂಗಳವಾರ ರಾತ್ರಿ 12 ಗಂಟೆಗೆ ನಡೆಯಲಿದೆ.
ನ.24ರಂದು ಸೋಮವಾರ ಸಂಜೆ 5.10ಕ್ಕೆ ಕೊಪ್ಪರಿಗೆ ಮುಹೂರ್ತ ನಡೆಯಲಿದೆ. 5.15ಕ್ಕೆ ದೀಪೋಜ್ವಲನೆಗೊಂಡು ಕುಣಿತ ಭಜನೆ, ರಾತ್ರಿ 7.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ನ.25ರಂದು ಮಂಗಳವಾರ ಬೆಳಗ್ಗೆ ಗಂಟೆ 8ರಿಂದ ನವಕ ಕಲಶ ಪ್ರದಾನ ಮತ್ತು 12 ತೆಂಗಿನಕಾಯಿ ಗಣಹೋಮ, ಬೆಳಗ್ಗೆ 10ರಿಂದ ನಾಗತಂಬಿಲ, 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 6.45ಕ್ಕೆ ಪಣೋಲಿಬೈಲು ಶ್ರೀ ಕೃಷ್ಣ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ಆಗಮಿಸಲಿದೆ.
7 ರಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ, 7.45ಕ್ಕೆ ಸಂಗೀತ ಗಾನ ಸಂಭ್ರಮ 9.15ಕ್ಕೆ ಹಾಸ್ಯ ನಾಟಕ ನಡೆಯಲಿದೆ. ರಾತ್ರಿ 10ಕ್ಕೆ ಭಂಡಾರದ ಮನೆಯಿಂದ ದೈವಗಳ ಭಂಡಾರ ಬಂದು 12ಕ್ಕೆ ವರ್ಷಾವಧಿ ಕೋಲ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸುವಂತೆ ದೈವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.