ಸಂಶೋಧನೆಗಳು ಉತ್ಪಾದನೆಗೆ ಪೂರಕವಾಗಿದ್ದು ದೇಶದ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಬೇಕು: ವೆಂಕಟೇಶ ದೇಶಪಾಂಡೆ
ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು: ಅಂತಾರಾಷ್ಟ್ರೀಯ ವಿಚಾರಸಂಕಿರಣ
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ವಿಭಾಗದ ಸಿಇಒ ಪೂರನ್‌ವರ್ಮ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯಲ್ಲಿ ಪರಿವರ್ತನೆಗಳಾಗುತ್ತಿದ್ದು, ವಿದ್ಯಾರ್ಥಿಗಳು ಇವುಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ. ಜಿಪಿಟಿ, ಕೃತಕ ಬುದ್ಧಿಮತ್ತೆ ಮೊದಲಾದ ಸ್ಮಾರ್ಟ್ ಪದ್ಧತಿಗಳಿಂದ ಎಲ್ಲಾ ಆಟೊಮೇಟಿಕ್ ಆಗಿ ಆಗುವುದರಿಂದ ಸಮಯ ಮತ್ತು ಪರಂಪರೆಯ ಹಿನ್ನೆಲೆಯಲ್ಲಿ ಸಂಸ್ಕೃತಿ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಸಂಶೋಧನೆಗಳನ್ನು ಮಾಡಬೇಕು ಎಂದರು.
ಉತ್ತಮ ಸಂವಹನ ಕೌಶಲ ಮತ್ತು ಚಿಂತನಾಲಹರಿಯೊಂದಿಗೆ ಮೂಲಭೂತ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸಂಕೀರ್ಣ ಸಮಸ್ಯೆಗಳನ್ನು ಸರಳ ಭಾಗಗಳಾಗಿ ವಿಂಗಡಿಸಿ ಎಲ್ಲಾ ವಿಭಾಗಗಳಲ್ಲಿಯೂ ಪರಿಣತಿ ಹೊಂದಿ ಕ್ಷಿಪ್ರ ಬದಲಾವಣೆಗಳನ್ನು ಸ್ವೀಕರಿಸಲು ಮುಕ್ತವಾದ ಮನಸ್ಸು ಹೊಂದಿರಬೇಕು ಎಂದು ಪೂರನ್‌ವರ್ಮ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ. ಮಾತನಾಡಿ, ಏನೇ ಆದರೂ ಮೊದಲು ಮಾನವನಾಗು ಎಂಬಂತೆ ಮಾನವ ಜನಾಂಗದ ಕಲ್ಯಾಣವೇ ಸಂಶೋಧನೆಗಳ ಗುರಿಯಾಗಬೇಕು. ಡಿಜಿಟಲ್ ಮಾಧ್ಯಮ ಹಾಗೂ ಆಧುನಿಕ ಸಮಶೋಧನೆಗಳಿಂದ ನೈತಿಕತೆ ಹಾಗೂ ಸೌಹಾರ್ದಯುತ ಮಾನವೀಯ ಸಂಬಂಧಗಳು ಕಡಿತಗೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.
ಮಂಗಳೂರು ವಿಭಾಗದ ಉಪಾಧ್ಯಕ್ಷೆ ಡಾ. ಅಶ್ವಿನಿ ಹೊಳ್ಳ ಉಪಸ್ಥಿತರಿದ್ದರು.
ಒಟ್ಟು 1680 ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 160 ಸಂಶೋಧಕರ ಲೇಖನಗಳು ವಿಚಾರಸಂಕಿರಣದಲ್ಲಿ ಮಂಡನೆಯಾಗಲಿವೆ.
ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕ ಡಾ. ಬಸವ ಟಿ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಪ್ರತಾಪಚಂದ್ರ ವಂದಿಸಿ, ಡಾ. ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.

