ಜುಡೋ ಸ್ಪರ್ಧೆ: ನೆತ್ತರಕೆರೆ ಶಾಲೆಯ 13 ವಿದ್ಯಾರ್ಥಿಗಳಿಂದ ವಿಶೇಷ ಸಾಧನೆ
ವಿದ್ಯಾರ್ಥಿಗಳಾದ ಆರುಷಿ, ಗೀಯೆರಶ್, ಹಂಸಿಕಾ, ಯಶಸ್ವಿನಿ, ಭೂಮಿಕಾ, ನಿಧಿನ್, ವೇದಾಂತ್, ಯಕ್ಷಿತ್ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡರೆ, ದೇನಿಕಾ, ಅನುಶ್ರೀ, ಆರಾಧಗಯ, ಶೈಲೇಶ್ ಅವರು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಪದಕ ಪಡೆದಿದ್ದಾರೆ. ಭುವೀಶ್ ತೃತೀಯ ಸ್ಥಾನದೊಂದಿಗರ ಕಂಚಿನಪದಕ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಈ ವಿದ್ಯಾರ್ಥಿಗಳಿಗೆ ಮಾರ್ಷಲ್ ಆಟ್೯ನ ತರಬೇತುದಾರರಾದ ರಾಜೇಶ್ ಮತ್ತು ಆಸ್ಮೀತಾ ರೈ ತರಬೇತು ನಿಒಡಿರುತ್ತಾರೆ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ, ಸಂತೋಷ್ ನೆತ್ತರಕೆರೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಪಕ ಮತ್ತು ಅಧ್ಯಾಪಕೇತರರು ಅಭಿವಂದನೆ ಸಲ್ಲಿಸಿದ್ದಾರೆ.
ಡಾ. ಮುನಿ ವೆಂಕಟೇಶ್ ಗೌಡಚಾರಿಟೇಬಲ್ ಟ್ರಸ್ಟ್ ಹಾಸನ, ಆಶ್ರಯ ಸೆಮನಟೃ ಫಾರ್ ಟ್ರಾನ್ಸದ ಫಾರ್ಮೇಶನ್ ಬೆಂಗಳೂರು, ಹಾಸನ ಜಿಲ್ಲಾ ಅಮೆಚೂರು ಜುಡೋ ಸಂಸ್ಥೆ, ಹಾಸನ ಜಿಲ್ಲಾ ಅಮೆಚೈರು ಬಾಡಿಬಿಲ್ಡರ್ಸ್ ಸಂಸ್ಥೆ, ಹಾಸನ ಜಿಲ್ಲಾ ಕ್ರೀಡಾ ಪರಿಷತ್ ಇದರ ಸಂಯುಕ್ತಾಶ್ರಯದಲ್ಲಿ ಡಾ. ಎ.ಸಿ.ಎಂ. ಅವರ ಜನ್ಮದಿನಾಚರಣೆಯ ಪ್ರಯುಕ್ತ ಈ ಜುಡೋ ಸ್ಪರ್ಧೆ ಆಯೋಜಿಸಲಾಗಿತ್ತು.