ಹರಕೆ: 18 ಮೊಳಕ್ಕೆ ಸೀಮಿತವಾಗಿರಬೇಕು
Tuesday, December 30, 2025
ಬಂಟ್ವಾಳ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೊಳಪಟ್ಟಿರುವ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅರ್ಪಿಸುವ ಹರಕೆಯ ಸೀರೆ 18 ಮೊಳಕ್ಕೆ ಸೀಮಿತವಾಗಿರಬೇಕು ಅದಕ್ಕಿಂತ ಕಡಿಮೆ ಮೊಳದ ಸೀರೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕ್ಷೇತ್ರದ ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2026 ರ ಜ.01 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.