ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಗೆ ಅವಾಚ್ಯ ನಿಂದನೆ: ದೂರು
ಬಂಟ್ವಾಳ: ಕಾಂಗ್ರೆಸ್ ನಾಯಕಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷೆ, ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ನಿವಾಸಿ ಲಾವಣ್ಯ ಬಲ್ಲಾಳ್ ಅವರಿಗೆ ಇನ್ಸ್‌ಟ್ರಾಗ್ರಾಂ ಖಾತೆಯಲ್ಲಿ ಅವಾಚ್ಯವಾಗಿ ನಿಂದಿಸಿರುವ ಆರೋಪದಲ್ಲಿ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರೀತಂ4419 ಎಂಬ ಹೆಸರಿನ ಇನ್ಸ್‌ಟ್ರಾಗ್ರಾಂ ಖಾತೆಯಲ್ಲಿ ಲಾವಣ್ಯ ಬಲ್ಲಾಳ್ ಅವರಿಗೆ ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ದೂರಲಾಗಿದೆ.
ಲಾವಣ್ಯ ಬಲ್ಲಾಳ್ ಅವರು ಗಣ್ಯ ವ್ಯಕ್ತಿಗಳ ಜೊತೆಗೆ ತೆಗೆದ ಫೋಟೋಗಳನ್ನು ತನ್ನ ಇನ್ಸ್‌ಟ್ರಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ಫೊಟೋಗಳಿಗೆ ಬಂದಿರುವ ಕಮೆಂಟ್‌ಗಳನ್ನು ಪರಿಶೀಲಿಸುತ್ತಿದ್ದಾಗ ಪ್ರೀತಂ4419 ಎಂಬ ಖಾತೆಯಿಂದ ‘ಎಸ್.ಪ್ರೀತಂ ಎಂಬ ಹೆಸರಿನಿಂದ ಪಾಲೋ ಮಾಡಿದ ವ್ಯಕ್ತಿಯು ಮಾನಹಾನಿಯ ರೀತಿ ಮಾಡಿ ಅವಮಾನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲಾವಣ್ಯ ಬಲ್ಲಾಳ್ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.