ಕಬಡ್ಡಿ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾರ್ತಿ ಧನಲಕ್ಷ್ಮೀಗೆ ರೈ ನಿವಾಸದಲ್ಲಿ ಅಭಿನಂದನೆ
Friday, December 5, 2025
ಬಂಟ್ವಾಳ: ಕಬಡ್ಡಿ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾರ್ತಿ, ಸುರತ್ಕಲ್‌ನ ಇಡ್ಯಾ ನಿವಾಸಿಯಾದ ಧನಲಕ್ಷ್ಮೀ ಪೂಜಾರಿ ಅವರು ಮಾಜಿ ಸಚಿವ ಬಿ. ರಮಾನಾಥ ರೈ ಅವರ ಕಳ್ಳಿಗೆ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದರು.
ಈ ಸಂದರ್ಭ ಧನಲಕ್ಷ್ಮೀ ಪೂಜಾರಿ ಅವರನ್ನು ಮಾಜಿ ಸಚಿವ ರಮಾನಾಥ ರೈ ದಂಪತಿ ಸನ್ಮಾನಿಸಿ ಮಾತನಾಡಿ, ಭಾರತವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸಲು ಕರ್ನಾಟಕದಿಂದ ಏಕೈಕ ಕ್ರೀಡಾಪಟು ಆಯ್ಕೆಯಾಗಿದ್ದಲ್ಲದೆ ಅವರು ನಮ್ಮ ತುಳುನಾಡಿನವರು ಎಂಬುದು ಅತ್ಯಂತ ಖುಷಿ ತಂದಿದೆ ಎಂದು ಶುಭ ಹಾರೈಸಿದರು.
ಧನುಭಾಗ್ಯ ಆರ್. ರೈ, ಕಬಡ್ಡಿ ಆಟಗಾರ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಮೂಡೂರು-ಪಡೂರು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಸಜೀಪಮುಮ್ನೂರು ಮೂರ್ತೆದಾರರ ಸೇ.ಸ. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಕಾರಂತ್, ಕಾಂಗ್ರೆಸ್ ಮುಖಂಡರಾದ ಪ್ರಥ್ವಿರಾಜ್ ಆರ್.ಕೆ. ಎಡಪದವು, ಬಾಲಕೃಷ್ಣ ಅಂಚನ್, ಚಂದ್ರಹಾಸ ಭಂಡಾರಿ, ಸುದೀಪ್ ಕುಮಾರ್ ರೈ ಮಾಣಿ, ಕರೀಂ ಬೊಳ್ಳಾಯಿ, ಜಗದೀಶ್ ಕೊಯಿಲ ಮತ್ತು ಧನಲಕ್ಷ್ಮೀ ಪೂಜಾರಿಯವರ ಪೋಷಕರಾದ ಇಡ್ಯಾ ನಾರಾಯಣ ಪೂಜಾರಿ ಹಾಗೂ ಶಶಿಕಲಾ ದಂಪತಿ ಮತ್ತಿತರರು ಉಪಸ್ಥಿತರಿದ್ದರು.