ಮೆಲ್ಕಾರ್ ಬಳಿ ಡಿವೈಡರ್‌ಗೆ ಕಾರು ಢಿಕ್ಕಿ ನಾಲ್ವರಿಗೆ ಗಾಯ
Thursday, December 4, 2025
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರಿಗೆ ಸಮೀಪದ ಮೆಲ್ಕಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಗು ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಿಂದ ಕಾರಿನಲ್ಲಿದ್ದ ಕಬಕ ನಿವಾಸಿ ಸತೀಶ್ ರಾವ್, ಅವರ ಪತ್ನಿ, ಪಡುಮಲೆ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಭಟ್ ಹಾಗೂ ಕಾರಿನಲ್ಲಿದ್ದ ಮಗುವಿಗೆ ಗಾಯಗಳಾದ್ದು, ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ ಮಂಗಳೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕಾರು ಮೆಲ್ಕಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ.
ಪುತ್ತೂರಿನ ಕೃಷ್ಣ ಪ್ರಸಾದ್ ಆಳ್ವ ಅವರು ಇದೇ ಮಾರ್ಗವಾಗಿ ಬರುತ್ತಿದ್ದ ವೇಳೆ ಅಪಘಾತಕ್ಕೀಡಾದ ಕಾರನ್ನು ಮತ್ತು ಗಾಯಾಳುಗಳನ್ನು ಗಮನಿಸಿದ ಅವರು, ತಕ್ಷಣ ಉಪಚರಿಸಿ ತನ್ನ ಕಾರಿನಲ್ಲಿ ಬಿ.ಸಿ. ರೋಡ್‌ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ತೀವ್ರ ಗಾಯಗಳಾಗಿರುವ ಹಿನ್ನೆಯಲ್ಲಿ ನಾಲ್ವರು ಗಾಯಾಳುಗಳನ್ನು ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.