ಸ್ಕೂಟರ್‌ಗೆ ಪಿಕಪ್ ಢಿಕ್ಕಿ: ಮೂವರಿಗೆ ಗಾಯ
Tuesday, December 9, 2025
ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಕೆಳಗಿನ ನಾವೂರು ಎಂಬಲ್ಲಿ ಪಿಕಪ್ ವಾಹನ ಢಿಕ್ಕಿ ಹೊಡೆದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ದಂಪತಿ ಹಾಗೂ ಪುತ್ರಿ ಗಾಯಗೊಂಡಿದ್ದಾರೆ.
ನಾವೂರು ಗ್ರಾಮದ ಪೂಪಾಡಿಕಟ್ಟೆ ನಿವಾಸಿ ಆರಿಫಾ ಬಾನು (37), ಅವರ ಪತಿ ರಮ್ಲ ಮನ್ಸೂರ್ ಹಾಗೂ ಪುತ್ರಿ ಮಹ್ ರೂಫ್ ಎಂಬವರು ಗಾಯಗೊಂಡಿದ್ದಾರೆ.
ಸ್ಕೂಟರಿನಲ್ಲಿ ರಮ್ಲ ಮನ್ಸೂರ್ ಸವಾರರಾಗಿ ಪತ್ನಿ ಹಾಗೂ ಪುತ್ರಿ ಸಹಸವಾರರಾಗಿ ನಾವೂರು ಕಡೆಯಿಂದ ಬಿಸಿ ರೋಡಿನತ್ತ ಸಂಚರಿಸುತ್ತಿದ್ದ ವೇಳೆ ಕೆಳಗಿನ ನಾವೂರು ಎಂಬಲ್ಲಿ ಎದುರಿನಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಗಾಯಾಳುಗಳಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.