ಡಿ.13, 14 ರಂದು ಸೌಹಾರ್ದ ಕ್ರಿಸ್ಮಸ್ ಉತ್ಸವ

ಡಿ.13, 14 ರಂದು ಸೌಹಾರ್ದ ಕ್ರಿಸ್ಮಸ್ ಉತ್ಸವ

ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆ ಮಂಗಳೂರು ಹಾಗೂ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಆಶ್ರಯದಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ ಡಿ.13 ಹಾಗೂ ಡಿ.14ರಂದು ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ.

ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅವರು, ಮಧ್ಯಾಹ್ನ 2.30ರಿಂದ ರಾತ್ರಿ 9.30ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕ್ಯಾರಲ್ ಹಾಡುಗಳ ಸ್ಪರ್ಧೆ, ಕ್ರಿಸ್ಮಸ್ ಕೇಲ್ ಸ್ಪರ್ಧೆ, ಕ್ರಿಸ್ಮಸ್ ಕೇಕ್ ಸ್ಪರ್ಧೆ, ಕ್ರಿಸ್ಮಸ್ ಸ್ಟಾರ್ ಸ್ಪರ್ಧೆ, ವೈನ್ ಮೇಳ, ಆಹಾರ ಮಳಿಗೆಗಳು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು. 

ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸೌಹಾರ್ದ ಕ್ರಿಸ್ಮಸ್ ಉತ್ಸವವು ಸಾಮುದಾಯಿಕ ಏಕತೆ ಹಾಗೂ ಶಾಂತಿಯ ಸಂದೇಶ ಸಾರುವ ವೇದಿಕೆಯಾಗಿದೆ. ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬುದು ಮೂಲ ಆಶಯ. ರೋಚಕ ಸ್ಪರ್ಧೆಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ಕ್ರಿಸ್ಮಸ್ ಆಯೋಜಿಸಲಾಗಿದೆ ಎಂದರು. 

ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೋ, ಪ್ರಚಾರ ಸಮಿತಿಯ ಸ್ಟ್ಯಾನ್ಲಿ ಬಂಟ್ವಾಳ್, ರೆಹಮಾನ್ ಖಾನ್ ಕುಂಜತ್ತಬೈಲ್, ಸಮರ್ಥ್ ಭಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article