ಜ.3 ರಂದು ‘ಬ್ಯುಸಿನೆಸ್ ಟಾನಿಕ್‘ 350
ಮಂಗಳೂರು: ಹೂಡಿಕೆ, ವಿಮೆ, ಗ್ರಾಹಕರ ರಕ್ಷಣೆ, ರೇರಾ, ಐಪಿಆರ್, ಆತ್ಮನಿರ್ಭರ್ ಭಾರತ್, ಎಂಎಸ್ ಎಂಇ, ಸ್ಟಾರ್ಟ್ ಅಪ್, ಹೊಸ ಕೈಗಾರಿಕಾ ನೀತಿ ಸಹಿತ ವಿವಿಧ ವಿಷಯಗಳ ಬಗ್ಗೆ ನಮ್ಮ ಕುಡ್ಲ ವಾಹಿನಿಯಲ್ಲಿ ಕಳೆದ 7 ವರ್ಷಗಳಿಂದ ಪ್ರಸಾರವಾಗುವ ಸಾಪ್ತಾಹಿಕ ಭಾನುವಾರದ ‘ಬ್ಯುಸಿನೆಸ್ ಟಾನಿಕ್‘ ಎಂಬ ಕಾರ್ಯಕ್ರಮದ 350ನೇ ಸಂಚಿಕೆ ಜ.3ರಂದು ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೆಕ್ಕಪರಿಶೋಧಕ ಎಸ್.ಎಸ್ ನಾಯಕ್ ಅವರು ಪ್ರತೀ ಭಾನುವಾರ ಬೆಳಗ್ಗೆ 10ರಿಂದ 11.30ರವರೆಗೆ ಈ ಕಾರ್ಯಕ್ರಮ ನಡೆಯುತ್ತದೆ. ನೇರ ಫೋನ್ ಇನ್ ಮುಖಾಂತರ ವೀಕ್ಷಕರು ಉತ್ತರವನ್ನು ಪಡೆಯುತ್ತಾರೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತರವನ್ನು ನೀಡಿದ್ದಾರೆ. ಸ್ಥಳದಲ್ಲಿ ಸಮಸ್ಯೆ ಬಗೆಹರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದರು.
‘ಬ್ಯುಸಿನೆಸ್ ಟಾನಿಕ್‘ನ ೩೫೦ನೇ ಸಂಚಿಕೆ ಜ.3ರಂದು ಬೆಳಗ್ಗೆ 9.15ಕ್ಕೆ ಉದ್ಘಾಟನೆಗೊಳ್ಳಲಿದೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ಯಾನಲಿಸ್ಟ್ ಗಳಾಗಿ ಯಶಸ್ವಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಸಂಚಿಕೆಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಗಣ್ಯರನ್ನು ಇದೇ ವೇಳೆ ಸಮ್ಮಾನಿಸಲಾಗುವುದು ಎಂದರು.
ನಮ್ಮ ಕುಡ್ಲ ನಿರ್ದೇಶಕರಾದ ಹರೀಶ್ ಬಿ.ಕರ್ಕೇರ, ಲೀಲಾಕ್ಷ ಬಿ.ಕರ್ಕೇರ, ‘ಬ್ಯುಸಿನೆಸ್ ಟಾನಿಕ್‘ನ ನಿರ್ದೇಶಕ ಅರ್ಜುನ್ ಪ್ರಕಾಶ್, ಕಾರ್ಯಕ್ರಮ ಸಂಯೋಜಕ ರಮೇಶ್ಚಂದ್ರ ಪ್ರಭು ಉಪಸ್ಥಿತರಿದ್ದರು.