50 ಲಕ್ಷ ಮೌಲ್ಯದ ಎಂ.ಡಿ.ಎಂ.ಎ. ಮಾದಕ ದ್ರವ್ಯ ವಶ
ಮಂಗಳೂರು ನಗರದ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಸಿ.ಸಿ.ಬಿ.ಯ ತಂಡವು ಖಚಿತ ಮಾಹಿತಿ ಸಂಗ್ರಹಿಸಿ ಡಿ.6 ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವಿನ್ಷನ್ ಹಾಲ್ ಬಳಿ ಒಂದು ಕಾರಿನಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ದಾಳಿ ನಡೆಸಿ ಕುಂದಾಪುರ ನಾವುಂದದ ಮೊಹಮ್ಮದ್ ಶಿಯಾಬ್ ಯಾನೆ ಶಿಯಾಬ್, ಉಳ್ಳಾಲ ನರಿಂಗಾನದ ಮೊಹಮ್ಮದ್ ನೌಷದ್ ಯಾನೆ, ನೌಷದ್, ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ ಯಾನೆ ಇಂಬ, ಬಂಟ್ವಾಳ ಬ್ರಹ್ಮರಕೂಟ್ಲುವಿನ ನಿಸಾರ್ ಅಹಮ್ಮದ್ ಯಾನೆ ನಿಸಾರ್ ಎಂಬವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಸುಮಾರು 50 ಲಕ್ಷ ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ. ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ನೀಲಿ ಬಣ್ಣದ ಮಾರುತಿ ಕಂಪನಿಯ ಈಖಔಓಘಿ ಮಾದರಿಯ ಕೆಎ-70-ಎಮ್ -7551 ಕಾರು, ಹಾಗೂ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮಾದಕ ವಸ್ತುವನ್ನು ಆರೋಪಿತರು ಬೆಂಗಳೂರಿನಲ್ಲಿ ಒಬ್ಬ ನೈಜೀರಿಯಾ ದೇಶದ ವ್ಯಕ್ತಿಯಿಂದ ತಂದು ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದರು. ಆರೋಪಿಗಳ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.