ಎಂಡಿಎಂಎ ಸಾಗಾಟ: ಐವರು ಆರೋಪಿಗಳಿಗೆ ಕಠಿಣ ಸಜೆ
2022ರ ಜೂನ್ ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳಿಗೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿ ತೀರ್ಪು ನೀಡಿದೆ, ಶಿಕ್ಷೆಗೊಳಗಾದವರನ್ನು ಎಂಡಿಎಂಎ ಪೂರೈಕೆ ಮಾಡಿದ್ದ ಸುಡಾನ್ ಪ್ರಜೆ ಲೂಯಲ್ ಡೇನಿಯಲ್ ಜಸ್ಟಿನ್ ಬೌಲೋ ಅಲಿಯಾಸ್ ಡ್ಯಾನಿ (25),
ಕಾಸರಗೋಡು ಉಪ್ಪಳದ ಮಹಮ್ಮದ್ ರಮೀಜ್ (24), ಕಾಸರಗೋಡು ಶಿರಿಯಾದ ಮೊಹಿದ್ದೀನ್ ರಾಶೀದ್ (24) ಉಪ್ಪಳ ಮುಳಿಂಜದ ಅಬ್ದುಲ್ ರವೂಫ್ (35) ಮತ್ತು ತಮಿಳುನಾಡು ಊಟಿಯ ಸಬಿತಾ ಅಲಿಯಾಸ್ ಚಿಂಚು (25).
ಇಂದು ನಡೆದ ವಿಚಾರಣೆಯಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತಾ ವಾದ ಮಂಡನೆ ಮಾಡಿದ್ದಾರೆ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಅವರು ಆರೋಪಿ ಲೂಯಲ್ ಡೇನಿಯಲ್, ರಾಶೀದ್ ಮತ್ತು ಸಬಿತಾಗೆ 12 ವರ್ಷ ಕಠಿಣ ಸಜೆ ಮತ್ತು 1.5 ಲಕ್ಷ ರೂ ದಂಡ ವಿಧಿಸಲಾಗಿದ್ದು, ರಮೀಜ್ ಗೆ 14 ವರ್ಷ ಕಠಿನ ಸಜೆ ಮತ್ತು 1.45 ಲಕ್ಷ ರೂ. ದಂಡ ಹಾಗೂ ಅಬ್ದುಲ್ ರವೂಫ್ ಗೆ 13 ವರ್ಷ ಕಠಿನ ಸಜೆ ಮತ್ತು 1.35 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ.