ಯತೀನ್ ಅವರಿಗೆ ಡಾಕ್ಟರೇಟ್ ಪದವಿ
Monday, December 1, 2025
ಮಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾಮಾಜಿಕ-ಆರ್ಥಿಕ ಸ್ಥಿತಿಯ ಮೇಲೆ ರಾಜ್ಯ ಸರ್ಕಾರದ ಯೋಜನೆಗಳ ಪ್ರಭಾವ: ದಕ್ಷಿಣ ಕನ್ನಡ ಮತ್ತು ಕರ್ನಾಟಕದ ಉಡುಪಿ ಜಿಲ್ಲೆಯನ್ನು ಉಲ್ಲೇಖಿಸಿ ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧಕ್ಕೆ ಯತೀನ್ ಸೂಟರ್‌ಪೇಟೆ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.
ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಈಶ್ವರ ಪಿ. ಅವರ ಮೇಲ್ವಿಚಾರಣೆಯಲ್ಲಿ ಯತೀನ್ ಸಂಶೋಧನೆ ನಡೆಸಿದ್ದರು.
ಯತೀನ್ ಅವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜ್‌ನ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇವರು ಸೂಟರ್‌ಪೇಟೆ ನಿವಾಸಿಗಳಾದ ದಿವಂಗತ ಎಸ್. ಸಂಕಪ್ಪ ಹಾಗೂ ಪುಷ್ಪ ದಂಪತಿಯ ಪುತ್ರ.