ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್
ಮಂಗಳೂರು: ಅಂಡರ್ವಾಟರ್ ಸ್ಪೋಟ್ಸ್ರ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಫಿನ್ ಸ್ವಿಮ್ಮಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಡಿ.19ರಿಂದ 22ರವರೆಗೆ 5ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ 2025 ಆಯೋಜಿಸಲಾಗಿದೆ.
ಡಿ.20ರಂದು ಬೆಳಗ್ಗೆ 7.30ರಿಂದ ಸ್ಪರ್ಧೆಗಳು ಆರಂಭಗೊಳ್ಳಲಿದೆ. ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗಣ್ಯರು ಭಾಗವಹಿಸುವರು. 8 ವರ್ಷದಿಂದ 70 ವರ್ಷದವರೆಗೆ ವಿವಿಧ ವಯೋಮಾನದಲ್ಲಿ ಹಲವು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ದೇಶದ 30 ರಾಜ್ಯಗಳ 400ಕ್ಕೂ ಅಧಿಕ ಜಿಲ್ಲೆಗಳಿಂದ 1300ಕ್ಕೂ ಹೆಚ್ಚು ಈಜುಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳೂರಿನ 50 ಮಂದಿ, ರಾಜ್ಯದ 120 ಮಂದಿ ನೋಂದಾಯಿಸಿದ್ದಾರೆ.
144 ಇವೆಂಟ್‌ಗಳು ನಡೆಯಲಿವೆ. ಒಟ್ಟು 458 ಪದಕ ನೀಡಲಾಗುವುದು. ಡಿ.22ರಂದು ಸಮಾರೋಪ ನಡೆಯಲಿದೆ ಎಂದು ಅಂಡರ್ವಾಟರ್ ಸ್ಪೋಟ್ಸ್ರ್ ಫೆಡರೇಶನ್ ಆಫ್ ಇಂಡಿಯಾ ಸೆಕ್ರೆಟರಿ ಜನರಲ್ ಡಾ. ತಪನ್ಕುಮಾರ್ ಪಾಣಿಗ್ರಹಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫಿನ್ ಸ್ವಿಮ್ಮಿಂಗ್ ಎಂಬುದು ಸ್ವಿಮ್ಮಿಂಗ್ ಸ್ಪೋರ್ಟ್ಸ್‌ನ ಹೊಸ ಆವೃತ್ತಿಯಾಗಿದೆ. ಯುಎಸ್‌ಎಫ್‌ಐ ಮೂಲಕ ಭಾರತದಲ್ಲಿ ಫಿನ್ ಸ್ವಿಮ್ಮಿಂಗ್ ಜನಪ್ರಿಯಗೊಳಿಸಲಾಗುತ್ತಿವೆ. ಭವಿಷ್ಯದಲ್ಲಿ ಈ ಕ್ರೀಡೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಹಿಂದೆ ಗೋವಾ, ಪುಣೆ, ದೆಹಲಿಯಲ್ಲಿ ಈ ಚಾಂಪಿಯನ್‌ಶಿಪ್ ನಡೆದಿತ್ತು ಎಂದರು.
ಪ್ರಮುಖರಾದ ಅಚಿಂತ್ಯ ಪಂಡಿತ್, ರೆಹಾನ್ ಸಿದ್ದಿಕಿ, ಬಿ.ಕೆ. ನಾಯರ್, ರಾಮಕೃಷ್ಣ ಉಪಸ್ಥಿತರಿದ್ದರು.