ಮಹಿಳೆಯರ ಮತ್ತು ಹೆಣ್ಣುಮಕ್ಕಳ ಕಳ್ಳಸಾಗಣೆಯ ಕುರಿತ ಜಾಗೃತಿ ಕಾರ್ಯಕ್ರಮ
Monday, December 29, 2025
ಮಂಗಳೂರು: ಪ್ರತಿ ಹೆಣ್ಣು ಕೂಡಾ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಕಳ್ಳಸಾಗಣಿಕೆಯ ಕುರಿತು ತಿಳುವಳಿಕೆ ಹೊಂದಿ ಜಾಗೃತರಾಗಿರುವುದು ಪ್ರಸ್ತುತ ಪರಿಸ್ಥಿತಿಯ ಅವಶ್ಯಕತೆಯಾಗಿದೆ ಎಂಬುದಾಗಿ ಇತ್ತಿಚಿಗೆ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ನಡೆದ ‘ಮಹಿಳೆಯರ ಮತ್ತು ಹೆಣ್ಣುಮಕ್ಕಳ ಕಳ್ಳಸಾಗಣೆಯ ಕುರಿತ ಜಾಗೃತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ಪೌಲ್ ಜಿ. ಅಕ್ವಿನಸ್ ಹೇಳಿದರು.
ಈ ಕಾರ್ಯಕ್ರಮವನ್ನು ಕಾಲೇಜಿನ ಸಮಾಜಕಾರ್ಯ ವಿಭಾಗ, ಐಕ್ಯೂಎಸಿ, ಲಯನ್ಸ್ ಕ್ಲಬ್ ಮಂಗಳೂರು, ಲಿಯೋ ಕ್ಲಬ್ ಮಂಗಳೂರು ಹಾಗೂ ಎಸ್ಎಐಟಿಐ ಇವರ
ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು. ಲಯನ್ ರಾಜೇಶ್ ಕಾಮತ್ ಎಂ.ಜೆ.ಎಫ್, ಅಧ್ಯಕ್ಷರು ಲಯನ್ಸ್ ಕ್ಲಬ್ ಮಂಗಳೂರು, ಇವರು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ವಹಿಸಿದ್ದರು.
ಎಮ್ಎಸ್ಡಬ್ಲ್ಯೂ ವಿಭಾಗದ ಸಂಯೋಜಕಿ ಅರುಣಾ ಕುಮಾರಿ ಸ್ವಾಗತಿಸಿ, ವಿದ್ಯಾರ್ಥಿ ನಾಗಭೂಷಣ್ ವಂದಿಸಿದರು, ವಿದ್ಯಾರ್ಥಿ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು. ಸಮಾಜಕಾರ್ಯ ವಿಭಾಗದ ಬೋಧಕರು ಹಾಗೂ ಸ್ನಾತಕೋತ್ತರ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದ ಫಲಾನುಭವಿಗಳಾಗಿದ್ದರು.