ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮ


ಮಂಗಳೂರು: ಕರಾವಳಿ ಉತ್ಸವ-2025 ರ ಪ್ರಯುಕ್ತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.

ಮಕ್ಕಳಿಗೆ ವನ್ಯ ಮೃಗಗಳ ಟ್ರೆಶರ್ ಹಂಟ್ ಕಾರ್ಯಕ್ರಮ: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮಕ್ಕಳಿಗೆ ವನ್ಯ ಮೃಗಗಳ ಟ್ರೆಶರ್ ಹಂಟ್ ಕಾರ್ಯಕ್ರಮ ಉದ್ಯಾನವನದ  ಆವರಣದಲ್ಲಿ ನಡೆಯಿತು.

ಪುಟ್ಟ ಪುಟ್ಟ ಮಕ್ಕಳು ಖುಷಿಯಿಂದ ಆಟವಾಡಿ ಸಂತೋಷ ಪಟ್ಟರು. ನಿಧಿಯನ್ನು ಹುಡುಕಿದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಜೈವಿಕ ಉದ್ಯಾನವನದ ನಿರ್ದೇಶಕ ಪ್ರಶಾಂತ್ ಕುಮಾರ್ ಪೈ, ಜೈವಿಕ ಉದ್ಯಾನವನದ ಜೀವ ಶಾಸ್ತ್ರಜ್ಞ ಪ್ರಶಾಂತ್ ಉಬ್ರಂಗಳ, ಸಹಾಯಕ ಅಭಿಯಂತರ ರಾಕೇಶ್.ಡಿ ಪಿ, ಶೈಕ್ಷಣಿಕ ಅಧಿಕಾರಿ ಸುಚಿತ್ರ ಎನ್., ಪ್ರಾಣಿ ಪರಿಪಾಲಕರು ಮತ್ತು ಇತರರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಪಕ್ಷಿವೀಕ್ಷಣೆ ಪ್ರವಾಸ ಕಾರ್ಯಕ್ರಮ:

ಕರಾವಳಿ ಉತ್ಸವ-2025ರ ಪ್ರಯುಕ್ತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮಕ್ಕಳಿಗೆ ಪಕ್ಷಿ ವೀಕ್ಷಣಾ ಪ್ರವಾಸ ಕಾರ್ಯಕ್ರಮ ಶನಿವಾರ ಉದ್ಯಾನವನದ  ಆವರಣದಲ್ಲಿ ನಡೆಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ,ಹೇರೂರಿನ ವಿದ್ಯಾರ್ಥಿಗಳು ಪಕ್ಷಿವೀಕ್ಷಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಮಾರು 12 ಪಕ್ಷಿ ಪ್ರಬೇಧಗಳನ್ನು ಗುರುತಿಸಿದರು .ಜೈವಿಕ ಉದ್ಯಾನವನದೊಳಗೆ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್ .ಜಿ ಮೋಹನ್, ಪಿಲಿಕುಳ ನಿಸರ್ಗಧಾಮವು ಜ್ಞಾನದ ಭಂಡಾರ. ಪಕ್ಷಿವೀಕ್ಷಣೆಯು ಉತ್ತಮ ಅವಕಾಶವಾಗಿದ್ದು ಅದನ್ನು ಎಲ್ಲಾ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. 

ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಪ್ರಶಾಂತ್ ಕುಮಾರ್ ಪೈ ರವರು ಮಾತನಾಡಿ, ವನ್ಯಜೀವಿಗಳು ಪಕ್ಷಿಗಳು ಪ್ರಕೃತಿಯಲ್ಲಿ ವಹಿಸುವ ಪಾತ್ರವನ್ನು ಅವುಗಳ ಸಂರಕ್ಷಣೆ ಹಾಗೂ ಅವುಗಳ ಅಗತ್ಯತೆಯನ್ನು ಹೇಳಿದರು.     

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ  ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜೈವಿಕ ಉದ್ಯಾನವನದ ಜೀವ ಶಾಸ್ತ್ರಜ್ಞ ಪ್ರಶಾಂತ್ ಉಬ್ರಂಗಳ ವಂದಿಸಿದರು. ಶೈಕ್ಷಣಿಕ ಅಧಿಕಾರಿ ಸುಚಿತ್ರ ಎನ್., ಪ್ರಾಣಿ ಪರಿಪಾಲಕರು ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಉರಗಗಳ ಜಾಗೃತಿ ಕಾರ್ಯಕ್ರಮ:

ಕರಾವಳಿ ಉತ್ಸವ-2025ರ ಪ್ರಯುಕ್ತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮಕ್ಕಳಿಗೆ ಉರಗ ಜಾಗೃತಿ ಕಾರ್ಯಕ್ರಮ ಭಾನುವಾರ ಉದ್ಯಾನವನದ  ಆವರಣದಲ್ಲಿ ನಡೆಯಿತು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಔಷಧಿ ವನದ ನಿರ್ವಾಹಕ ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಉರಗ ಜೀವ, ಸಾಂಸ್ಕೃತಿಕ ಮಹತ್ವ ಹಾಗೂ ಹಾವು ಕಡಿತಕ್ಕೆ ನೀಡಲಾಗುವ ಪರಂಪರಾಗತ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಪ್ರಶಾಂತ್ ಕುಮಾರ್ ಪೈ ಉರಗಗಳ ಬಗೆಗಿನ  ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಯಮಗಳ ಬಗ್ಗೆ ವಿವರಿಸಿ, ಉರಗ ಪ್ರಭೇದಗಳ ಸಂರಕ್ಷಣೆಗೆ ಕರೆ ನೀಡಿದರು. 

ಮಂಗಳೂರಿನ ಪ್ರಾಣಿ ದಯಾ ಸಂಘದ ಅಧ್ಯಕ್ಷ ಚಾರ್ಲ್ಸ್ ಪೌಲ್ ಮಾತನಾಡಿ, ವಿಷರಹಿತ ಮತ್ತು ವಿಷಪೂರಿತ ಉರಗಗಳನ್ನು ಗುರುತಿಸುವ ವಿಧಾನ  ಮತ್ತು ಹಾವು ಕಡಿತದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸಾ ಕ್ರಮದ ಕುರಿತು ವಿವರಿಸಿದರು. 

ಪಿಲಿಕುಳ ಜೈವಿಕ ಉದ್ಯಾನವನದ ಶೈಕ್ಷಣಿಕ ಅಧಿಕಾರಿ ಸುಚಿತ್ರ .ಎನ್ ಸ್ವಾಗತಿಸಿ, ಜೀವ ಶಾಸ್ತ್ರಜ್ಞ ಪ್ರಶಾಂತ್ ಉಬ್ರಂಗಳ ಕಾರ್ಯಕ್ರಮ  ನಿರೂಪಿಸಿ ವಂದಿಸಿದರು. ಉರಗ ಪಾಲಕರಾದ ದಿನೇಶ್ ಮತ್ತು ಹರ್ಷಿತ್, ಕಚೇರಿ ಸಹಾಯಕ ಮನೋಜ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article