ಕೆನರಾ ಬ್ಯಾಂಕ್ ವತಿಯಿಂದ ಪಿಲಿಕುಳದಲ್ಲಿ ನೂತನ ಬ್ಯಾಂಕಿಂಗ್ ಕಿಯೋಸ್ಕ್
ಮಂಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆದ ಕೆನರಾ ಬ್ಯಾಂಕ್ ವತಿಯಿಂದ ಪಿಲಿಕುಳದಲ್ಲಿ ನೂತನ ಕಿಯಾಸ್ಕ್ (Kiosk) ಅನ್ನು ಉದ್ಘಾಟಿಸಲಾಯಿತು.
ಈ ಕಿಯಾಸ್ಕ್ ಉದ್ಘಾಟನೆಯಿಂದ ಪಿಲಿಕುಳ ನಿಸರ್ಗಧಾಮ ಸಂದರ್ಶಕರಿಗೆ, ಸಾರ್ವಜನಿಕರಿಗೆ ಇ-ಟಿಕೇಟ್ ಸೇವೆಗಳು ಸುಲಭವಾಗಿ ಹಾಗೂ ತ್ವರಿತವಾಗಿ ಲಭ್ಯವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ದರ್ಶನ್ ಎಚ್.ವಿ., ಭಾರತೀಯ ಆಡಳಿತ ಸೇವೆ (IAS) ಅವರು ಉದ್ಘಾಟಿಸಿ ಶುಭಹಾರೈಸಿ ಇಂತಹ ಬ್ಯಾಂಕಿಂಗ್ ಸೌಲಭ್ಯ ಒದಗಿಸಿದ ಕೆನರಾ ಬ್ಯಾಂಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ್ ಖಾರ್ಬರಿ ಭಾಗವಹಿಸಿ ಇಂತಹ ಬ್ಯಾಂಕಿಂಗ್ ಉಪಕ್ರಮಗಳು ಆರ್ಥಿಕ ಸೇರ್ಪಡೆ, ಡಿಜಿಟಲ್ ವ್ಯವಹಾರದ ಉತ್ತೇಜನಕ್ಕೆ ಪ್ರಮುಖವಾಗಿ ಪಿಲಿಕುಳ ಸಂದರ್ಶಕರಿಗೆ ಸಾರ್ವಜನಿಕರಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಪ್ರಧಾನ ವ್ಯವಸ್ಥಾಪಕ ಮಂಜುನಾಥ್, ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕಿ ಲತಾ ಕುರುಪು, ದಕ್ಷಿಣ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಎನ್. ಶೆಟ್ಟಿ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪಿಲಿಕುಳದಲ್ಲಿ ಆರಂಭಗೊಂಡ ಈ ಕಿಯಾಸ್ಕ್ ಮೂಲಕ ಪಾವತಿ ಸಂಬಂಧಿತ ಸೇವೆಗಳು, ಹಾಗೂ ಇತರೆ ಮೂಲಭೂತ ಬ್ಯಾಂಕಿಂಗ್ ಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗಲಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.