ವಿಶೇಷ ರೈಲು ಸಂಚಾರ
ಮಂಗಳೂರು: ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ತಿರುವನಂತಪುರ ಸೆಂಟ್ರಲ್‌ನಿಂದ ಹ.ನಿಜಾಮುದ್ದೀನ್ ಸ್ಟೇಷನ್ ಗೆ ಏಕಮುಖ ವಿಶೇಷ ರೈಲು ಸಂಚರಿಸಲಿದೆ.
ನಂ.06159 ತಿರುವನಂತಪುರ ಸೆಂಟ್ರಲ್ ಹ.ನಿಜಾಮುದ್ದೀನ್ ರೈಲು ತಿರುವನಂತಪುರದಿಂದ ಡಿ.13ರ ಶನಿವಾರ ಬೆಳಗ್ಗೆ 7.45ಕ್ಕೆ ಹೊರಟು ಸೋಮವಾರ ರಾತ್ರಿ 7 ಗಂಟೆಗೆ ಹ.ನಿಜಾಮುದ್ದೀನ್ ತಲಪಲಿದೆ.
ಈ ರೈಲು ಕಾಸರಗೋಡಿಗೆ ಶನಿವಾರ ಸಂಜೆ 5.44ಕ್ಕೆ ಮಂಗಳೂರು ಜಂಕ್ಷನ್ ಗೆ ರಾತ್ರಿ 7.05ಕ್ಕೆ ಬರಲಿದೆ ರೈಲಿನಲ್ಲಿ ಒಂದು ಎ.ಸಿ. ಫಸ್ಟ್ ಕ್ಲಾಸ್ ಕೋಚ್, 5 ಎಸಿ 3 ಟೈರ್, 12 ಎಸಿ 3 ಟೈರ್, 1 ಹಾಟ್ ಬಫೆ ಕಾರ್ ಕೋಚ್, 2 ಜನರೇಟರ್ ಕಾರ್ ಕೋಚ್ಗಳಿರುತ್ತವೆ.
ರೈಲಿಗೆ ಕೊಲ್ಲಂ ಜಂಕ್ಷನ್, ಕಾಯಂಕುಳಂ ಜಂಕ್ಷನ್, ಚೆಂಗನ್ನೂರು, ತಿರುವಲ್ಲ, ಚಂಗನಶೇರಿ, ಕೊಟ್ಟಾಯಂ, ಎರ್ನಾಕುಳಂ ಟೌನ್, ಆಲುವ, ತ್ರಿಶೂರ್, ಉಡುಪಿ, ಕುಂದಾಪುರ, ಬೈಂದೂರು, ಕಾರವಾರ, ಮಡಗಾಂವ್ ಜಂಕ್ಷನ್, ತಿವಿಂ, ರತ್ನಗಿರಿ, ಚಿಪ್ಲುನ್, ಪನ್ವೆಲ್, ವಸಾಯ್ ರೋಡ್, ಉಧಾಲಿ ಜಂಕ್ಷನ್, ವಡೋದರ ಜಂಕ್ಷನ್, ರತ್ಲಂ ಜಂಕ್ಷನ್, ಕೋಟ ಜಂಕ್ಷನ್, ಸವಾಯ್ ಮಾಧೋಪುರ್ ಜಂಕ್ಷನ್ ಹಾಗೂ ಮಥುರ ಜಂಕ್ಷನ್ ಗಳಲ್ಲಿ ನಿಲುಗಡೆ ಇದೆ.