ಈಜು ಸ್ಪರ್ಧೆ: ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
Tuesday, December 2, 2025
ಮಂಗಳೂರು: ಚಾರ್ವಿ ಎಂ. ಇವರು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಬಾಲಕಿ-ಬಾಲಕರ ಈಜು ಸ್ಪರ್ಧೆಯಲ್ಲಿ 14ರ ವಯಸ್ಸಿನ ವಿಭಾಗದಲ್ಲಿ 2 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕವನ್ನು, ಪಡೆದು ದೆಹಲಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಈಜು ಸ್ವರ್ಧೆಯಲ್ಲಿ ಕರ್ನಾಟಕ ತಂಡದಿಂದ ಪ್ರತಿನಿಧಿಸಲಿದ್ದಾರೆ.
ಇವರು ಲೇಡಿಹಿಲ್ ವಿಕ್ಟೋರಿಯ ಹೈಸ್ಕೂಲಿನ ವಿದ್ಯಾರ್ಥಿನಿ ಹಾಗೂ ಮಂಗಳಾ ಸ್ವಿಮೀಂಗ್ ಕ್ಲಬ್‌ನ ಶಿಶಿರ್ ಎಸ್. ಗಟ್ಟಿ ಇವರಿಂದ ತರಬೇತಿಯನ್ನು ಪಡೆಯುತಿದ್ದರು.