ಅರ್‌ಟಿಒ ಕಚೇರಿಗೆ ಬಾಂಬ್ ಬೆದರಿಕೆ
Monday, December 15, 2025
ಮಂಗಳೂರು: ಮಂಗಳೂರು ಆರ್‌ಟಿಒ ಕಚೇರಿಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿದೆ. ಕಿಡಿಗೇಡಿಗಳು ಈ ಬಗ್ಗೆ ಆರ್ ಟಿಒ ಕಚೇರಿಗೆ ಇ-ಮೇಲ್ ಮಾಡಿದ್ದಾರೆ.
ಮಂಗಳೂರಿನ ನೆಹರೂ ಮೈದಾನ ಬಳಿ ಇರುವ ಆರ್ ಟಿಒ ಕಚೇರಿಗೆ ಭಾನುವಾರ ರಾತ್ರಿ ವೇಳೆ ಕಚೇರಿಯ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆಯ ಇ ಮೇಲ್ ಬಂದಿದೆ. ಮೇಲ್ ಬಂದಿದೆ. ಐದು ಕಡೆಗಳಲ್ಲಿ ಬಾಂಬ್ ಇಡುವುದಾಗಿ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.
ಸೋಮವಾರ ಅಪರಾಹ್ನ 12 ಗಂಟೆಯ ವೇಳೆ ಆರ್ ಟಿಒ ಅಧಿಕಾರಿಯ ಈ ಇ-ಮೇಲ್ ಗಮನಿಸಿದ್ದಾರೆ. ತಕ್ಷಣ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಂಗಳೂರು ನಗರ ಎಎಸ್‌ಸಿ ಮತ್ತು ಬಿಡಿಡಿಎಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಆರ್ ಟಿಒ ಕಚೇರಿ ಹಾಗೂ ಕಚೇರಿ ಆವರಣದಲ್ಲಿ ಪರಿಶೀಲನೆ ಮಾಡಲಾಗಿದೆ.