ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಲ್ಲಿ ಲೋಪದ ಬಗ್ಗೆ ಸತ್ಯಶೋಧನ ಸಮಿತಿ: ಜಿಲ್ಲಾಧ್ಯಕ್ಷರಿಗೆ ವರದಿ ಸಲ್ಲಿಕೆ
Saturday, December 20, 2025
ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಲ್ಲಿ ಆಗಿರುವ ಲೋಪದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ರಚಿಸಲಾದ ಸತ್ಯಶೋಧನ ಸಮಿತಿಯ ಸಭೆಯು ಡಿ.20 ರಂದು ಸಂಜೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕಿನಲ್ಲಿ ಪ್ರವಾಸ ಹಾಗೂ ಅಧ್ಯಯನದ ಮೂಲಕ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಲ್ಲಿ ರೈತರಿಗೆ ಆಗಿರುವ ಲೋಪ ಹಾಗೂ ಅನ್ಯಾಯದ ಬಗ್ಗೆ ಸಂಗ್ರಹಿಸಲಾದ ವರದಿಯನ್ನು ಸತ್ಯಶೋಧನ ಸಮಿತಿಯ ಸಂಚಾಲಕ, ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿ ಜಿಲ್ಲಾಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಸಮಿತಿ ಸದಸ್ಯರುಗಳಾದ ರಾಕೇಶ್ ರೈ ಕೆಡೆಂಜಿ, ಶಾಂತಿ ಪ್ರಸಾದ್ ಹೆಗ್ಡೆ, ರಾಜರಾಮ ಭಟ್, ಗಣೇಶ್ ಗೌಡ, ಸದಾನಂದ ಉಂಗಿಲ್‌ಬೈಲ್, ರಾಜೀವ ಶೆಟ್ಟಿ ಸಲ್ಲಾಜೆ, ಮಾಧವ ಮಾವೆ, ಅಶೋಕ್ ಕೆಂಜಿಲ ಮಲ್ಲಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೊರಂಗ ಉಪಸ್ಥಿತರಿದ್ದರು.