‘ಬಹುತ್ವವನ್ನು ಹೊಂದಿರುವ ದೇಶದಲ್ಲಿ ಬಂಧುತ್ವವನ್ನು ಕಾಣುವುದೇ ಸಂತೋಷದ ವಿಚಾರ’: ಕ್ಯಾ. ಬ್ರಿಜೇಶ್ ಚೌಟ
ಭಾನುವಾರದಂದು ಬಿಕರ್ನಕಟ್ಟೆ ಬಜ್ಜೋಡಿಯಲ್ಲಿ ಇನ್ಫೆಂಟ್ ಮೇರಿ ಚರ್ಚ್, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಹಾಗೂ ಕೊರ್ಡೆಲ್ ಕ್ರಿಕೆಟರ‍್ಸ್ ಕುಲಶೇಖರ ಇವರ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಲ್ಪಟ್ಟಿದ್ದ ರಾಷ್ಟ್ರೀಯ ಸಮಗ್ರತೆ, ಐಕ್ಯತೆ ಹಾಗೂ ಭಾವೈಕ್ಯತೆಯ ಸಂಗಮ “ರಾಷ್ಟ್ರೀಯತೆಯ ಕ್ರಿಸ್‌ಮಸ್ ಸಂಭ್ರಮ 2025”ನ್ನು ಉದ್ಘಾಟಿಸಿ ಹೀಗೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ್ ಕಾಮತ್, ರಾಷ್ಟ್ರದ ಚಿಂತನೆಯನ್ನೇ ಇಟ್ಟುಕೊಂಡು ತಮ್ಮ ಎಲ್ಲಾ ಕಾರ್ಯಗಳಲ್ಲೂ ಭಾವೈಕ್ಯತೆಯ ಸಂದೇಶವನ್ನು ಕಾರ್ಯರೂಪದಲ್ಲಿ ಸಾಧಿಸಿ ಕಾರ್ಯಗತಗೊಳಿಸುವ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಇಡೀ ರಾಷ್ಟ್ರಕ್ಕೆ ಒಂದು ಮಾದರಿ ಎಂದು ಹೇಳಿದರು. ಇತ್ತೀಚೆಗೆ ನಡೆದ “ಅಸುವು ರಾಷ್ಟ್ರ ಸಮರ್ಪಿತ” ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಯದಲ್ಲಿ ರಾಷ್ಟ್ರೀಯ ಚಿಂತನೆಯ ಬಗ್ಗೆ ಒಂದು ಉತ್ತಮವಾದ ನಿದರ್ಶನ ನನಗೆ ಕಂಡು ಬಂದಿದೆ ಎಂದು ಹೇಳಿದರು.
ಪದುವಾ ಕಾಲೇಜಿನ ಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೊರವರು ಮಾತನಾಡಿ ಯೇಸುಕ್ತಿಸ್ತನ ಜನನದ ಸಂಭ್ರಮದಲ್ಲಿ ಆತನು ಭೋದಿಸಿದ ಉಪದೇಶಗಳನ್ನು ಜೀವನದಲ್ಲಿ ಹಾಗೂ ದೈನಂದಿನ ಕಾರ್ಯದಲ್ಲಿ ನಾವು ಅಳವಡಿಸಿಕೊಂಡು ನಡೆದಾಗ ಅದೇ ನಿಜವಾದ ಕ್ರಿಸ್‌ಮಸ್ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ಸಂಘಚಾಲಕ್ ಡಾ. ಸತೀಶ್ ರಾವ್, ಮಾಜಿ ಶಾಸಕ ಜೆ.ಆರ್. ಲೋಬೊ, ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯಾಧಿಕಾರಿಣಿ ಭಗಿನಿ ಲಿಲ್ಲಿ ಪಿರೇರಾ, ಮೂಡಾದ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಕೆಲರಾಯಿ ಮಸೀದಿಯ ಧರ್ಮಗುರು ಮೊಹಮ್ಮದ್ ಶಫೀಕ್, ಹರಿಹರ ಪಾಂಡುರಂಗ ವಿಠಲ ಭಜನಾ ಮಂದಿರ ಕಂಡೆಟ್ಟು ಇದರ ಅಧ್ಯಕ್ಷ ಪ್ರೊ. ಜಯರಾಮ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸಂದೇಶವನ್ನು ನೀಡಿದರು.
ಇನ್ಫೆಂಟ್ ಮೇರಿ ಚರ್ಚ್ ಪ್ರಧಾನ ಧರ್ಮಗುರು ಡೊಮಿನಿಕ್ ವಾಸ್‌ರವರು ಸ್ವಾಗತಿಸಿದರು. ರಾಷ್ಟ್ರೀಯವಾದಿ ಕ್ರೈಸ್ತರ ವಾದಿಕೆಯ ಸ್ಥಾಪಕರ ಫ್ರ್ಯಾಂಕ್ಲಿನ್ ಮೊಂತೆರೊರವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಚರ್ಚ್ ಉಪಾಧ್ಯಕ್ಷೆ ಜಾನೆಟ್ ಡಿ’ಸೋಜಾ ವಂದಿಸಿದರು. ನೋಟರಿ ಪಬ್ಲಿಕ್ ಲ್ಯಾನಿ ಎಂ. ಪಿಂಟೋ ಕಾರ್ಯಕ್ರಮ ನಿರೂಪಿಸಿದರು.
ಸೂರ್ಯನಾರಾಯಣ ದೇವಸ್ಥಾನ ಮರೋಳಿ ಅಧ್ಯಕ್ಷ ಗಣೇಶ್ ಶೆಟ್ಟಿ ಜಪ್ಪುಗುಡ್ಡೆಗುತ್ತು, ಮಾಜಿ ನಗರಪಾಲಿಕಾ ಸದಸ್ಯರುಗಳಾದ ಕೇಶವ ಮರೋಳಿ, ವನಿತಾ ಪ್ರಸಾದ್, ಕಿಶೋರ್ ಕೊಟ್ಟಾರಿ, ನವೀನ್ ಡಿ’ಸೋಜಾ ಗೌರವ ಅತಿಥಿಗಳಾಗಿದ್ದರು.