ಗ್ರಾಮಸಭೆಗೆ ಅಧಿಕಾರಿಗಳ ಗೈರು: ಗ್ರಾಮಸ್ಥರು ಗರಂ

ಗ್ರಾಮಸಭೆಗೆ ಅಧಿಕಾರಿಗಳ ಗೈರು: ಗ್ರಾಮಸ್ಥರು ಗರಂ


ಮಂಗಳೂರು: ಅಧಿಕಾರಿಗಳೇ ಬಾರದ ಗ್ರಾಮ ಸಭೆ ಯಾಕಾಗಿ ಮಾಡುತ್ತೀರಿ ಗ್ರಾಮ ಸಭೆಯನ್ನು ಯಾಕೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತೀರಿ ಅಧಿಕಾರಿಗಳು ಬಾರದ ಗ್ರಾಮ ಸಭೆ ಬೇಡಾ ಕೇವಲ ನಾಲ್ಕು ಇಲಾಖೆಯ ಅಧಿಕಾರಿಗಳಿಂದ ಗ್ರಾಮ ಸಭೆ ಬೇಡಾ ಸಭೆ ರದ್ದುಗೊಳಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ಇಂದು ಚೇಳೈರು ಗ್ರಾಮ ಪಂಚಾಯತ್‌ನಲ್ಲಿ ನಡೆದ 3ನೇ ಹಂತದ ಗ್ರಾಮ ಸಭೆಯಲ್ಲಿ ನಡೆಯಿತು.

ಇದಕ್ಕೆ ಉತ್ತರಿಸಿದ ಗ್ರಾಮ ಸಭೆಯ ನೋಡೆಲ್ ಅಧಿಕಾರಿ ಮಂಗಳೂರು ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್ ಗ್ರಾಮ ಸಭೆಗೆ ಬಾರದ ಅಧಿಕಾರಿಗಳ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು ಚೇಳೈರು ಗ್ರಾಮ ಪಂಚಾಯತ್‌ನಲ್ಲಿ ಹೊಸದಾಗಿ ಬಂದ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರು ಮನೆ ನಿರ್ಮಾಣಕ್ಕೆ 9 ಮತ್ತು 11 ಹಾಗೂ ಲೈಸೆನ್ಸ್ ಬಗ್ಗೆ ಅರ್ಜಿ ನೀಡಿ ತುಂಬಾ ಸಮಯವಾದರೂ 9 ಮತ್ತು 11 ನೀಡುತ್ತಿಲ್ಲ ಮತ್ತು ಗ್ರಾಮದ ಅಭಿವೃದ್ಧಿ ಕೆಲಸ ಅಗುತ್ತಿಲ್ಲ ಈ ಬಗ್ಗೆ ಗ್ರಾಮಸ್ಥರು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು ಇದಕ್ಕೆ ಉತ್ತರಿಸಿದ ನೋಡೆಲ್ ಅಧಿಕಾರಿಗಳು ಪಿ.ಡಿ.ಒ ಸಮಸ್ಯೆ ಬಗ್ಗೆ ಹಲವಾರು ಬಾರಿ ನಮ್ಮತಾಲ್ಲೂಕು ಪಂಚಾಯತ್‌ಗೆ ದೂರುಗಳು ಬಂದಿರುತ್ತದೆ ಅಭಿವೃದ್ಧಿ ಅಧಿಕಾರಿಗಳಿಗೆ ಅನುಭವದ ಕೊರತೆ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಸ್ಥರಿಗೆ ಸ್ವಲ್ಪ ತೊಂದರೆಯಾಗಿದೆ ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರ ಮೂಲಕ ಗ್ರಾಮಸ್ಥರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಮನೆ ನಿವೇಶನದ ಬಗ್ಗೆ ಹಲವಾರು ವರ್ಷಗಳಿಂದ ಎಷ್ಟು ಮನವಿ ನೀಡಿದರು ಪ್ರಯೋಜನವಿಲ್ಲ ಯಾವಾಗ ನಿವೇಶನ ನೀಡುತ್ತೀರಿ ಎಂದು ಗ್ರಾಮಸ್ಥರು ಅಗ್ರಹಿಸಿದರು. 

ಇದಕ್ಕೆ ಉತ್ತರಿಸಿದ ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ, ಪರಿಶಿಷ್ಟ ಜಾತಿ ಪಂಗಡದ ನಿವೇಶನ ರಹಿತರ ಮಧ್ಯಗ್ರಾಮದಲ್ಲಿರುವ 3 ಎಕ್ರೆ ಜಾಗವನ್ನು ಸಮತಟ್ಟು ಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಗಿದ ಕೂಡಲೇ ನಿವೇಶನ ನೀಡಲಾಗುವುದು ಹಾಗೂ ಇತರರಿಗೆ ಮಧ್ಯ ಗ್ರಾಮದಲ್ಲಿ 8-60 ಎಕ್ರೆ ಸರಕಾರಿ ಜಾಗವಿದ್ದು ಅದು ತಾಲ್ಲೂಕು ಪಂಚಾಯತ್‌ನ ಹೆಸರಿನಲ್ಲಿದೆ ಗ್ರಾಮ ಪಂಚಾಯತ್ ಹೆಸರಿಗೆ ಅದ ಕೂಡಲೇ ಇತರರಿಗೆ ನಿವೇಶನ ನೀಡುವ ಕೆಲಸ ಪ್ರಾರಂಭಿಸಲಾಗುವುದು ಎಂದರು.

ಮಧ್ಯ ಪ್ರಗತಿನಗರದಲ್ಲಿ ಸುಮಾರು 2 ಎಕ್ರೆ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅದನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅಧಿಕಾರಿಗಳಲ್ಲಿ ವಿಚಾರಿಸಿದರೆ ಅದು ನ್ಯಾಯಾಲಯದಲ್ಲಿ ಇದೇ ಎನ್ನುತ್ತಾರೆ ಅದು ಎನಾಗಿದೆ ಅದರ ಸಂಪೂರ್ಣ ಮಾಹಿತಿ ಬೇಕು ಎಂದು ಗ್ರಾಮ ಅಡಳಿತ ಅಧಿಕಾರಿ ಸುಲೋಚನ ಅವರಲ್ಲಿ ಗ್ರಾಮಸ್ಥರು ಕೇಳಿಕೊಂಡರು ಅದಕ್ಕೆ ಉತ್ತರಿಸಿದ ಗ್ರಾಮ ಅಡಳಿತ ಅಧಿಕಾರಿ ಒಂದು ವಾರದೊಳಗೆ ಅದರ ಮಾಹಿತಿ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಪ್ರೋಜೆಕ್ಟ್ ಡೈರಕ್ಟರ್ ಜಯಾರಾಮ, ಪಂಚಾಯತ್ ಉಪಾಧ್ಯಕ್ಷೆ ರೇಖಾ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಪ್ರಶಾಂತ್ ಅಳ್ವ, ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ, ಸದಸ್ಯರಾದ ಯಶೋದ ಬಿ., ಸುಧಾಕರ ಶೆಟ್ಟಿ, ಪ್ರತಿಮಾ ಶೆಟ್ಟಿ, ಲತಾ, ವಸಂತಿ, ದಿವ್ಯಾ, ಪ್ರೇಮ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಚರಣ್ ಕುಮಾರ್, ಪಂಚಾಯತ್ ಕಾರ್ಯದರ್ಶಿ ಲೋಕನಾಥ್ ಭಂಡಾರಿ, ಗ್ರಾಮ ಲೆಕ್ಕಧಿಕಾರಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಸಭೆಯಲ್ಲಿ ಇತ್ತೀಚೆಗೆ ಚೇಳೈರು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ತೆರೇಸಾ ಅವರು ನಿವೃತ್ತಿ ಹೊಂದಿದ್ದು, ಅವರಿಗೆ ಮತ್ತು ರಾಷ್ಟ್ರೀಯ ಮಟ್ಟದ ತ್ರೋಬಾಲ್ ಆಟಗಾರ್ಥಿ ಕೃತಿಕಾ ಅವರನ್ನು ಸನ್ಮಾನಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article