ಅಧಿನಂದನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಸಮುದಾಯದ ಏಳಿಗೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ದೊರಕಿಸಿಕೊಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಮುದಾಯದ ಕಚೇರಿ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಸಫಾಯಿ ಕರ್ಮಚಾರಿ ಅಧ್ಯಕ್ಷ ಪ್ರೇಮ್ ನಾಥ್ ಪಿ.ಬಿ. ಬಳ್ಳಾಲ್ ಭಾಗ್, ಪರಿಶಿಷ್ ಜಾತಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮುಳೂರು, ಜಿಲ್ಲಾ ತುಳು ಪರಿಷತ್ ಸದಸ್ಯ ರೋಹಿತ್ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು. ದ.ಕ. ಜಿಲ್ಲಾ ಬಾಕುಡ ಸಮಾಜ ಸೇವಾ ಸಮಿತಿಯ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ನವೀನ್ ಕುಮಾರ್ ಅತ್ತಾವ, ಜಿಲ್ಲಾ ಪದಾಧಿಕಾರಿಗಳಾದ ಇಂದಿರಾ ನಾಗೇಶ್, ಶೋಭಾ, ಸುನೀತ, ಸತೀಶ್, ಕಮಲಮ್ಮ, ಗಣೇಶ್, ಲಕ್ಷ್ಮಣ, ಸಂದೀಪ್, ಮನೋಹರ್, ದೇವಕಿ, ಶಕುಂತಲಾ, ಸ್ವರ್ಣಲತಾ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ದೇವಾನಂದ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಕೇರಳ ಕೇಂದ್ರ ಸಮಿತಿಯ ಅಧ್ಯಕ್ಷ ತುಳಸಿದಾಸ್ ಮಂಜೇಶ್ವರ, ವಿಜಯ್ ಪಂಡಿತ್ ಮಂಗಲ್ಪಾಡಿ, ಅಶೋಕ್ ಕೊಡ್ಲಮೊಗರು, ರಾಮ ಮಂಗಲ್ಪಾಡಿ, ರಾಜೇಶ್ ಕೊಡ್ಲಮೊಗರು ಮತ್ತಿತರರು ಉಪಸ್ಥಿತರಿದ್ದರು. ಸಚಿನ್ ಕುಂಬಳೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
