ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ವಿಶೇಷ ರೈಲು

ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ವಿಶೇಷ ರೈಲು

ಮಂಗಳೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜೆ ಸೀಸನ್ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೇ ಯಶವಂತಪುರ - ಕಾರವಾರ - ಯಶವಂತಪುರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ ಘೋಷಿಸಿದೆ. ಡಿಸೆಂಬರ್ 24 ರಿಂದ 28 ರವರೆಗೆ ನಾಲ್ಕು ದಿನಗಳಲ್ಲಿ ಎರಡೂ ಕಡೆಗೆ ರೈಲುಗಳು ಸಂಚರಿಸಲಿವೆ.

ವೇಳಾಪಟ್ಟಿ..

ರೈಲು ಸಂಖ್ಯೆ 06267 ಯಶವಂತಪುರದಿಂದ ಕಾರವಾರಕ್ಕೆ 24.12.2025 ಮತ್ತು 27.12.2025 ರಂದು ಸಂಚರಿಸಲಿದೆ. ಯಶವಂತಪುರದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.10ಕ್ಕೆ ತಲುಪಲಿದೆ.

ರೈಲು ಸಂಖ್ಯೆ 06268 ಕಾರವಾರದಿಂದ ಯಶವಂತಪುರಕ್ಕೆ 25.12.2025 ಮತ್ತು 28.12.2025 ರಂದು ಸಂಚಾರ ಮಾಡಲಿದೆ. ಕಾರವಾರದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಯಶವಂತಪುರಕ್ಕೆ ಮರುದಿನ ಬೆಳಗ್ಗೆ 4.30ಕ್ಕೆ ತಲುಪಲಿದೆ.

ಯಶವಂತಪುರ -  ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ಚಿಕ್ಕಬಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು IRCTC ವೆಬ್ಸೈಟ್, ರೈಲು ನಿಲ್ದಾಣ ಕೌಂಟರ್‌ಗಳು ಅಥವಾ NTES ಆಪ್ ಮೂಲಕ ಪರಿಶೀಲಿಸಿ ಬುಕ್ ಮಾಡಬಹುದು. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ವೇಳೆ ಸುಗಮ ಪ್ರಯಾಣಕ್ಕಾಗಿ ಈ ವಿಶೇಷ ರೈಲುಗಳು ನೆರವಾಗಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article