ಸನಾಗೆ ಆಫ್ರಿಕನ್ ಚೆಸ್ ಕಿರೀಟ

ಸನಾಗೆ ಆಫ್ರಿಕನ್ ಚೆಸ್ ಕಿರೀಟ


ಮಂಗಳೂರು: ಮೂಲತಃ ಮಂಗಳೂರಿನವರಾದ ಉಗಾಂಡ ಪ್ರತಿನಿಧಿಸುವ ‘ಯುವ ಚೆಸ್ ಪ್ರತಿಭೆ ಸನಾ ಓಂ ಪ್ರಕಾಶ್ ಕಯ್ಯಾರ್ ಆಫ್ರಿಕನ್ ಯೂಥ್ ಚೆಸ್ ಚಾಂಪಿಯನ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ, ಪ್ರತಿಷ್ಟಿತ ‘ವುಮನ್ ಇಂಟರ್ನ್ಯಾಷನಲ್ ಮಾಸ್ಟರ್’ ಪಟ್ಟವನ್ನು ಅಲಂಕರಿಸಿದ್ದಾರೆ. 2025ರ ಡಿಸೆಂಬರ್ 7 ರಿಂದ 13 ರವರೆಗೆ ಜಿಂಬಾವ್ವೆಯ ಹಾರರೆಯಲ್ಲಿ ನಡೆದ ಈ ಚಾಂಪಿಯನ್‌ನಲ್ಲಿ ಸನಾ ತೋರಿದ ಅಮೋಘ ಪ್ರದರ್ಶನವು ಅವರನ್ನು ಪೂರ್ವ ಆಫ್ರಿಕಾ ಪ್ರದೇಶದಿಂದ ಈ ‘ಗೌರವ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರ ರನ್ನಾಗಿಸಿದೆ. ಈ ಮೂಲಕ ಅವರು ಫಿಡೆ ರೇಟಿಂಗ್‌ನಲ್ಲಿ 2000 ಅಂಕ ದಾಟಿದ ‘ಪೂರ್ವ ಆಫ್ರಿಕಾದ ಮೊದಲ ಆಟಗಾರ್ತಿ’ ಎಂಬ ದಾಖಲೆಯನ್ನೂ ಬರೆದರು.

2022ರಲ್ಲಿ ಜಾoಬಿಯಾದಲ್ಲಿ ನಡೆದ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿಯ ಪದಕ ದೊಂದಿಗೆ ‘ವುಮನ್ ಕ್ಯಾಂಡಿಡೇಟ್ ಫ್ಯಡ್ ಮಾಸ್ಟರ್ಸ್’ ಪಟ್ಟ ಪಡೆದ ಸನಾ ಮತ್ತಷ್ಟು ಉತ್ತಮ ಪಡಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ. 2024ರಲ್ಲಿ ಹಂಗಾರೆ ಬುಡಪೆಸ್ಟ್ 45ನೇ ಒಲಿಮ್ಫಿಯಡ್‌ನಲ್ಲಿ ‘ವುಮೆನ್ ಫೈಡ್ ಮಾಸ್ಟರ್’ ಟೈಟಲ್ ಇವರು ಪಡೆದಿದ್ದಾರೆ.

‘ಸಹೋದರನ ಕಂಚಿನ ಸಾಧನೆ’ ಇದೇ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ‘ಸನಾ’ ಅವರ ಕಿರಿಯ ಸಹೋದರ ಶೋಭಿತ್ ಓಂಪ್ರಕಾಶ್ ಕಯ್ಯಾರ್ (16) ವರ್ಷದೊಳಗಿನ ಓಪನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಗಮನಾರ್ಹ ಪ್ರದರ್ಶನ ನೀಡಿದರು. ತೀವ್ರ ಪೈಪೋಟಿಯಿಂದ ಕೂಡಿದ ವಿಭಾಗಲ್ಲಿ ಅವರು ತೋರಿದ ಆಟ ಮೆಚ್ಚುಗೆಗೆ ಪಾತ್ರವಾಯಿತು.

ಮಂಗಳೂರಿನ ತರಬೇತಿ:

ಈ ಸಹೋದರಿ-ಸಹೋದರನ ಯಶಸ್ಸಿನ ಹಿಂದೆ ಮಂಗಳೂರಿನ ನಂಟು ಇದೆ. ಭಾರತಕ್ಕೆ ಬಂದಾಗಲೆಲ್ಲಾ ಇವರಿಬ್ಬರೂ ಮಂಗಳೂರಿನ ‘ಡೆರಿಕ್ಸ್ ಚೆಸ್ ಸ್ಕೂಲ್’ನಲ್ಲಿ (ಡಿಸಿಎಸ್) ಶ್ರೀಮಾನ್ ಡೆರಿಕ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಾರೆ.

ಈರ್ವರೂ ಶ್ರೀ ಓಂ ಪ್ರಕಾಶ್ ಮತ್ತು ಸರಿತಾ ಓಂ ಪ್ರಕಾಶ್ ಕಯ್ಯಾರ್ ಇವರ ಮಕ್ಕಳಾಗಿದ್ದು ಕೀರ್ತಿಶೇಷ ಕಯ್ಯಾರ್ ಗೋಪಾಲ ಆಚಾರ್ಯ (ಗಜಾನನ ಜೂವೆಲ್ಲೆರ್ಸ್ ಟೆಂಪಲ್ ಸ್ಕ್ವೇರ್) ಇವರ ಮೊಮ್ಮಕ್ಕಳಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article