ತೆಂಕಮಿಜಾರು: 1 ಕೋ.ರೂ. ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ಅಶ್ವತ್ಥಪುರ-ಸಂಪಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
Saturday, December 6, 2025
ಮೂಡುಬಿದಿರೆ: 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರ-ಸಂಪಿಗೆ ಜಿಲ್ಲಾ ಮುಖ್ಯ ರಸ್ತೆಯ ಕಾಮಗಾರಿಗೆ ಶಾಸಕ ಉಮಾನಾಥ ಎ. ಕೋಟ್ಯಾನ್ ಗುದ್ದಲಿಪೂಜೆ ನೆರವೇರಿಸಿದರು.
ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ದಿನೇಶ್ ಭಟ್, ರುಕ್ಮಿಣಿ, ಸಮಿತಾ, ನಿಶಾ, ನಮಿತಾ, ಲಕ್ಷ್ಮೀ, ಗೀತಾ, ಮಹೇಶ್, ವಿದ್ಯಾನಂದ ಶೆಟ್ಟಿ, ಬಿಜೆಪಿ ಪುತ್ತಿಗೆ ಮಹಾಶಕ್ತಿ ಕೇಂದ್ರದ ಕಾಯ೯ದಶಿ೯ ಶ್ಯಾಮ್ ಭಟ್, ಪ್ರಮುಖರಾದ ರಾಘವೇಂದ್ರ ರಾವ್ ಮತ್ತು ಹಿರಿಯರಾದ ಅರುಣ್ ಕುಮಾರ್ ಈ ಸಂದಭ೯ದಲ್ಲಿದ್ದರು.
