ಡಿ.25: ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪೋತ್ಸವ
Monday, December 22, 2025
ಮೂಡುಬಿದಿರೆ: ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ವಿಶ್ವಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಡಿಸೆಂಬರ್ 25 ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಲಿದೆ.
ಅತಿಶಯ ಸಿದ್ಧಕ್ಷೇತ್ರವಾದ ಮೂಡುಬಿದಿರೆಯ ಈ ಪುಣ್ಯಕ್ಷೇತ್ರದಲ್ಲಿ ಅಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ.
ಸಂಜೆ 6 ರಿಂದ ವಿವಿಧ ಭಜನಾ ತಂಡಗಳಿಂದ ಭಕ್ತಿ ಸುಧೆ-ಜಿನ ಭಜನಾ ಕಾರ್ಯಕ್ರಮ, 6:35ಕ್ಕೆ: ಭಗವಂತನಿಗೆ ಪವಿತ್ರ ಪಂಚಾಮೃತ ಅಭಿಷೇಕ, 7:30ರಿಂದ 8:30ರವರೆಗೆ: ಮಹಾಪುರಾಣ ವಾಚನ ಮತ್ತು ಪ್ರವಚನ, ನಿವೃತ್ತ ಅಧ್ಯಾಪಕ ಉದಯಕುಮಾರ್ ಮುದ್ದ ಅವರಿಂದ ವಾಚನ ಹಾಗೂ ಶಿವಪ್ರಕಾಶ್ ಇಜಿತೊಟ್ಟು ಅವರಿಂದ ವ್ಯಾಖ್ಯಾನ ನಡೆಯಲಿದೆ. ರಾತ್ರಿ 8ಕ್ಕೆ: ಸಾವಿರಾರು ಹಣತೆಗಳ ಬೆಳಕಿನಲ್ಲಿ 'ಲಕ್ಷ ದೀಪೋತ್ಸವ' ಹಾಗೂ ಮಹಾಮಂಗಳಾರತಿ ನೆರವೇರಲಿದೆ.
ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಟ್ರಸ್ಟ್ ವತಿಯಿಂದ ನಡೆಯುವ ಧಾರ್ನಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬಸದಿಗಳ ಮೊಕ್ತೇಸರರಾದ ಪಟ್ಟಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಬೆಟ್ಕೇರಿ, ಆದರ್ಶ್ ಕೊಂಡೆ, ಹಾಗೂ ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.