ರಾಜ್ಯಮಟ್ಟದ ಅಲ್ ಬಿರ್ರ್ ಶಾಲೆಗಳ ವಿಜ್ಞಾನ ಮೇಳ ಹಾಗೂ ಕಲಾ ಸ್ಪರ್ಧೆ: ಅಡ್ಡೂರು ಶಾಲೆ ಚಾಂಪಿಯನ್
ಮೂಡುಬಿದಿರೆ ಅಲ್ ಬಿರ್ರ್ ಶಾಲೆ ಹಾಗೂ ಕೈಕಂಬದ ಅಲ್ ಬಿರ್ರ್ ಶಾಲೆ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಅಂಗರಕರಿಯ ಸಯ್ಯದ್ ಅಕ್ರಮ್ ಅಲಿ ತಂಙಳ್ ಅವರು ದುವಾ ನೆರವೇರಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದ್ದು ಮೂಡುಬಿದಿರೆ ಜುಮ್ಮಾ ಮಸೀದಿ ಖತೀಬರಾದ ಶರೀಫ್ ದಾರಿಮಿ ಶುಭ ಹಾರೈಸಿದರು.
ಅಲ್ ಬಿರ್ರ್ ವಿದ್ಯಾರ್ಥಿ ಝೈನುಲ್ ಆಬಿದೀನ್ ಕಿರಾಅತ್ ಪಠಿಸಿದರು.
ಅಲ್ ಬಿರ್ರ್ ಜಿಲ್ಲಾ ಕೋಡಿನೇಟರ್ ಶುಕೂರ್ ದಾರಿಮಿ ಕರಾಯ,ಮೂಡುಬಿದಿರೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುರ್ರಹ್ಮಾನ್, ಲಾಡಿ ಜುಮ್ಮಾ ಮಸೀದಿ ಖತೀಬರಾದ ಫಾಯಿಝ್ ಫೈಝಿ,ಆಜುಮ್ ಅಲ್ ಬಿರ್ರ್ ಇಂಟರ್ ನ್ಯಾಶನಲ್ ಸ್ಕೂಲ್ ನ ಕಾರ್ಯದರ್ಶಿ ಮಾಲಿಕ್ ಅಝೀಝ್, ಕೋಶಾಧಿಕಾರಿ ಇರ್ಫಾನ್, ಟ್ರಸ್ಟಿಗಳಾದ ಅಲ್ತಾಫ್ ಗಂಟಾಲ್ಕಟ್ಟೆ,ಶಮೀಮ್ ಅಳಿಯೂರು, ಉದ್ಯಮಿಗಳಾದ ಅಹಮದ್ ಹುಸೇನ್, ಗಫೂರ್ ಕೋಟೆಬಾಗಿಲು, ಅಶ್ರಫ್ ಮರೋಡಿ, ಶೇಕ್ ಮೋನು ಅಡ್ಡೂರು, ಅಬ್ದುಲ್ ಖಾದರ್ ಅಡ್ಡೂರು, ಮಜೀದ್ ಹಾಜಿ ಕಣ್ಣೂರ್, ಅಲ್ತಾಫ್ ಲೊರೆಟ್ಟೊಪದವು, ಶಾಫಿ ಪುತ್ತೂರು, ಬಾತಿಶ್ ಹಾಜಿ ಪುತ್ತೂರು, ಅಲ್ ಬಿರ್ರ್ ಕೇಂದ್ರ ಸಮಿತಿಯ ಮುಖಂಡರಾದ ನವಾಝ್ ವಯತಿಲ, ಫಿರೋಝ್ ಗಜ್ಜಲಿ, ಫಾಝಲುರ್ರಹ್ಮಾನ್, ಶಾಫಿರುದ್ದೀನ್, ನಹೀಮ್, ಮೂಡುಬಿದಿರೆ ಅಲ್ ಬಿ ರ್ರ್ ಅಧ್ಯಾಪಕರಾದ ಸಫ್ವಾನ್ ಬಾಖವಿ, ಮುಸ್ತಫಾ ಫೈಝಿ ಕಿನ್ಯ, ಹಫೀಝ್ ಅನ್ಸಾರಿ, ಆರಿಫ್ ಕಮ್ಮಾಜೆ ಕೈಕಂಬ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.