ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ನಿಂದ ಸೌಹಾದ೯ ಕ್ರಿಸ್ಮಸ್, ಸಾಧಕರಿಗೆ ಸನ್ಮಾನ
ಮೂಡುಬಿದಿರೆ ವಲಯದ ಪ್ರಧಾನ ಧಮ೯ಗುರು ಒನಿಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರಪಂಚವು ದುಂಡಾಗಿದೆ ಆದ್ದರಿಂದ ನಾವು ಇನ್ನೊಬ್ಬರಿಗೆ ಕೊಟ್ಟದ್ದನ್ನು ಅದು ತಿರುಗಿ ಮತ್ತೆ ನಮ್ಮ ಜೀವನಕ್ಕೆ ನೀಡುತ್ತದೆ ಎಂಬ ಭಾವನೆಯಿಂದ ನಾವು ಕೆಲಸ ಮಾಡಬೇಕು ಎಂದು ಹೇಳಿದ ಅವರು ಮೂಡುಬಿದಿರೆಯಿಂದ ಇಸ್ರೇಲ್ ಗೆ ಉದ್ಯೋಗಕ್ಕಾಗಿ ತೆರಳಿದ ಯುವಕರು ತಂಡವನ್ನು ಕಟ್ಟಿಕೊಂಡು ಅಸಹಾಯಕರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ್ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ, ಶಾಂತಿ, ಸೌಹಾರ್ದತೆ, ಪ್ರೀತಿ, ಕ್ಷಮಾ ಗುಣಗಳು ಪ್ರಪಂಚದಲ್ಲಿ ಉಳಿದಿದ್ದರೆ ಅದು ಕ್ರೈಸ್ತ ಸಮುದಾಯದಿಂದ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ:
104 ವರ್ಷದ ಎವ್ಲೀನ್ ಗೋವಿಯಸ್, ವಿಶ್ವ ದಾಖಲೆ ಮಾಡಿದ ಭರತನಾಟ್ಯ ಕಲಾವಿದೆ ರೆಮೋನಾ ಇವೆಟ್ ಪಿರೇರಾ, ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ, ಸಮಾಜ ಸೇವಕ ಮುನೀರ್ ನಡುಪಳ್ಳ, ಅವರನ್ನು ಸನ್ಮಾನಿಸಲಾಯಿತು.
ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ್, ಎ ಜಿ ಸೋನ್ಸ್ ನ ಉಪನ್ಯಾಸಕ ಶಿವಪ್ರಸಾದ್ ಹೆಗ್ಡೆ, ಆಲಂಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಅಮಿತ್ ಡಿ'ಸಿಲ್ವ, ಉದ್ಯಮಿಗಳಾದ ಅಬುಲಾಲ್ ಪುತ್ತಿಗೆ, ಸಿ ಎಚ್ ಅಬ್ದುಲ್ ಗಪೂರ್, ಅಶ್ವಿನ್ ಜೆ ಪಿರೇರಾ, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಮಂಗಳೂರಿನ ಅಜು೯ನ್ ಭಂಡಾಕ೯ರ್, ವಿಶೇಷ ಆಹ್ವಾನಿತರಾಗಿ ಮೂಡುಬಿದಿರೆ ಕಥೋಲಿಕ್ ಸಭಾದ ಅಧ್ಯಕ್ಷ ಆಲ್ವೀನ್ ರೋಡ್ರಿಗಸ್, ವಲಯ ಎಸ್ ವಿಪಿ ಅಧ್ಯಕ್ಷ ರೆಕ್ಸಾನ್ ಭಾಗವಹಿಸಿದ್ದರು.
53 ಕುಟುಂಬಗಳಿಗೆ ಕ್ರಿಸ್ಮಸ್ ಆಹಾರ ಕಿಟ್, ಕುಸ್ವಾರ್, ಪ್ರೋತ್ಸಾಹಕ ಧನ, ಮಲ್ಪೆಯ ಕಾರುಣ್ಯ ಸಂಸ್ಥೆಗೆ 10,000 ರೂ. ಕಲ್ಲಮುಂಡ್ಕೂರಿನ ಬಾಲಕಿಗೆ ಇನ್ಸುಲಿನ್ ಗಾಗಿ, ಹೊಸಬೆಟ್ಟಿನ ವೃದ್ಧೆಯ ಚಿಕಿತ್ಸೆಗಾಗಿ ತಲಾ 5000 ರೂ. ವಿತರಿಸಲಾಯಿತು.
ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಸಂಸ್ಥಾಪಕ ಸುನಿಲ್ ಮೆಂಡೋನ್ಸಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ತಮ್ಮ ಸ್ವ ಅನುಭವಗಳನ್ನು ಹಂಚಿಕೊಂಡರು.
ಕಾರ್ಯದರ್ಶಿ ಲತೀಶಿಯಾ ಗೋಮ್ಸ್ ವರದಿ ವಾಚಿಸಿದರು. ವಿಯೊಲ್ಲಾ ರೊಸಾರಿಯೋ ನಿರೂಪಿಸಿ, ಸ್ಪೂರ್ತಿ ವಿದ್ಯಾರ್ಥಿ ತಂಡದಿಂದ ಸ್ವಾಗತ ನೃತ್ಯ ನಡೆಯಿತು.
