ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ತೆಂಕಮಿಜಾರಿನಲ್ಲಿ ಮಾತೃವಂದನಾ, ಮಾತೃ ಭೋಜನ ಕಾಯ೯ಕ್ರಮ
Wednesday, December 3, 2025
ಮೂಡುಬಿದಿರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ ಪಿ ವೈ ಎಸ್ ಎಸ್) ಕರ್ನಾಟಕ ಪೊಳಲಿ ನಗರದ ಅಶ್ವಥಪುರ ಶ್ರೀ ಸೀತಾರಾಮಚಂದ್ರ ಶಾಖೆಯ ವತಿಯಿಂದ ತೆಂಕಮಿಜಾರು ಪಂಚಾಯತ್ ನ ಸಂತೆಕಟ್ಟೆ ವಿವಿದೋದ್ಧೇಶ ಸಭಾಂಗಣದಲ್ಲಿ ಸಮಿತಿಯ ವಿಶೇಷ ಕಾರ್ಯಕ್ರಮವಾಗಿರುವ ಮಾತೃಧ್ಯಾನ, ಮಾತೃವಂದನಾ, ಮಾತೃಭೋಜನ ಕಾರ್ಯಕ್ರಮ ನಡೆಯಿತು.
ಉಷಾ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಸಾವಿತ್ರಿ ಭಾಗವಹಿಸಿದ್ದರು. ರೇಖಾ ಮಾತೃಧ್ಯಾನದ ಜೊತೆ ಪ್ರಾಸ್ತವಿಕ ಮಾತುಗಳನ್ನಾಡಿದರು.
ಜಿಲ್ಲಾ ಪ್ರಮುಖರು, ನಗರ ಪ್ರಮುಖರ ಉಪಸ್ಥಿತಿಯಲ್ಲಿ ಭಜನೆ, ಆಟೋಟಗಳು, ನಗುವೇ ಯೋಗ ಮುಂತಾದ ಚಟುವಟಿಕೆಗಳನ್ನು ನಡೆಸಲಾಯಿತು.
ನಗರದಿಂದ ಸುಮಾರು 350 ಸಂಖ್ಯೆಯಲ್ಲಿ ಯೋಗಬಂಧುಗಳು ಜೋಡಿಸಿಕೊಂಡಿದ್ದರು. 48 ದಿನಗಳ ಯೋಗ ತರಗತಿಯ ವರದಿಯನ್ನು ಲಕ್ಷ್ಮೀ ಮಂಡಿಸಿದರು. ಜಯಶ್ರೀ ಅತಿಥಿಗಳನ್ನು ಸ್ವಾಗತಿಸಿ ಲಕ್ಷ್ಮೀ ವಂದಿಸಿದರು ಹಾಗೂ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.
