ಅಯನಾ ವಿ. ರಮಣ್ ಗೆ ಇಂಗ್ಲಿಷ್ ಎಮ್. ಎ.ಯಲ್ಲಿ ಚಿನ್ನದ ಪದಕ

ಅಯನಾ ವಿ. ರಮಣ್ ಗೆ ಇಂಗ್ಲಿಷ್ ಎಮ್. ಎ.ಯಲ್ಲಿ ಚಿನ್ನದ ಪದಕ


ಮೂಡುಬಿದಿರೆ: ಮೈಸೂರು ವಿಶ್ವವಿದ್ಯಾನಿಲಯವು 2024 - 25 ನೇ ಸಾಲಿನಲ್ಲಿ ನಡೆಸಿದ ಅಂತಿಮ ವರ್ಷದ ಎಮ್. ಎ ಪರೀಕ್ಷೆಯಲ್ಲಿ  ಮೂಡುಬಿದಿರೆಯ ಅಯನಾ.ವಿ.ರಮಣ್ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಿದ್ದಾರೆ.

ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ಉನ್ನತ ವ್ಯಾಸಂಗ ನಡೆಸಿದ ಅಯನಾ. ವಿ. ರಮಣ್  ' ಅಮೆರಿಕನ್ ಲಿಟರೇಚರ್' ವಿಷಯದಲ್ಲಿ ಗೋಲ್ಡ್ ಮೆಡಲ್ ಗೆದ್ದ ಸಾಧನೆ ಮಾಡಿದ್ದಾರೆ. 

ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ಅವರು, ಆಳ್ವಾಸ್ ನ ಹಿರಿಯ ವಿದ್ಯಾರ್ಥಿಯಾಗಿದ್ದು , ರೋಟರಿ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ನ ಹಳೆವಿದ್ಯಾರ್ಥಿಯಾಗಿದ್ದಾರೆ.

ಭರತನಾಟ್ಯದಲ್ಲಿ ವಿದ್ವತ್ ಪದವಿ ಯೊಂದಿಗೆ ದೂರದರ್ಶನ ಕಲಾವಿದೆಯಾಗಿಯೂ ಮಾನ್ಯತೆ ಪಡೆದಿರುವ ಅಯನಾ, ಸಿದ್ಧಕಟ್ಟೆಯಲ್ಲಿ

ನಾಟ್ಯಾಯನ ಕಲಾ ಅಕಾಡೆಮಿ ಸ್ಥಾಪಿಸಿ  ಭರತನಾಟ್ಯ ತರಗತಿ ನಡೆಸುತ್ತಿದ್ದು, ಆಳ್ವಾಸ್ ಉಪನ್ಯಾಸಕಿ ಡಾ. ಮುಕಾoಬಿಕಾ ಜಿ.ಎಸ್. ಮತ್ತು ಕಲಾವಿದ ಕೆ.ವಿ. ರಮಣ್ ದಂಪತಿಯ ಪುತ್ರಿಯಾಗಿದ್ದಾರೆ. 

ಮೈಸೂರು ವಿಶ್ವವಿದ್ಯಾಲಯದ ಮುಂಬರುವ  106 ನೇ ಘಟಿಕೋತ್ಸವದಲ್ಲಿ ಅಯನಾ.ವಿ.ರಮಣ್ ಚಿನ್ನದ ಪದಕ ಸ್ವೀಕರಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article