ವಾಮಾಚಾರದ ಶಂಕೆ: ಪಾಲಡ್ಕ ಗ್ರಾಮಸ್ಥರಿಂದ ಪೊಲೀಸರಿಗೆ ದೂರು

ವಾಮಾಚಾರದ ಶಂಕೆ: ಪಾಲಡ್ಕ ಗ್ರಾಮಸ್ಥರಿಂದ ಪೊಲೀಸರಿಗೆ ದೂರು


ಮೂಡುಬಿದಿರೆ: ಕಳೆದ ಕೆಲವು ದಿನಗಳಿಂದ ಪ್ರೇತ ಉಚ್ಛಾಟನೆಯ ರೀತಿಯಲ್ಲಿ  ವಾಮಾಚಾರ ನಡೆಸುತ್ತಿದ್ದಾರೆಂದು ಶಂಕೆ ವ್ಯಕ್ತ ಪಡಿಸಿ ಪಾಲಡ್ಕ ಗ್ರಾ.ಪಂ. ಸದಸ್ಯ ಜಗದೀಶ್ ಕೋಟ್ಯಾನ್  ಮೂಡುಬಿದಿರೆ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ. 


ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಗ್ರಾಮದ ಜೋಡುಕಟ್ಟೆ ಹಾಗೂ ಜನತಾ‌ನಗರ ಸಂಪರ್ಕಿಸುವ, ಮೂರು ರಸ್ತೆಗಳ ಕೂಡುವ ರಸ್ತೆಯಲ್ಲಿ ಹಲವು ಬಾರಿ ಪ್ರೇತ ಉಚ್ಛಾಟನೆ ವಾಮಾಚಾರ ನಡೆಸುತ್ತಿರುವುದು ಕಂಡು ಬಂದಿದೆ. ಅದಕ್ಕೆ ಪೂರಕವಾಗಿ ಕೆಲವು ವಸ್ತುಗಳು ರಸ್ತೆಯಲ್ಲಿ ಕಾಣಸಿಕ್ಕಿದೆ. ಶಾಲಾ ಮಕ್ಕಳು ಸಹಿತ ಸಾರ್ವಜನಿಕರೇ ಹೆಚ್ಚು ಓಡಾಡುವ ಈ ಸ್ಥಳದಲ್ಲಿ ಈ ರೀತಿಯ ಕೃತ್ಯ ಮಾಡಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ  ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article